ಮಂಗಳೂರು: ಅ.14-15ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
Update: 2022-10-12 23:06 IST
ಮಂಗಳೂರು, ಅ.12: ಪಣಂಬೂರು-ಕೆಐಒಸಿಎಲ್ ಮುಂದಿನ ಸರ್ವಿಸ್ ರಸ್ತೆಯ ಮುಖ್ಯ ಕೊಳವೆಯು ಒಡೆದು ನೀರು ಸೋರಿಕೆಯಾಗಿದ್ದು, ದುರಸ್ತಿಯ ಹಿನ್ನೆಲೆಯಲ್ಲಿ ಅ.14ರ ಬೆಳಗ್ಗೆ 6ರಿಂದ ಅ.15ರ ಬೆಳಗ್ಗೆ 6ರವರೆಗೆ ಪಣಂಬೂರು, ಸುರತ್ಕಲ್, ಕೂಳೂರು, ಕೋಡಿಕಲ್, ಕಾಟಿಪಳ್ಳ, ಕಾನ, ಬಾಳ, ಕುಳಾಯಿ, ಮುಕ್ಕ, ಜಲ್ಲಿಗುಡ್ಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.