ಮಹಿಳಾ ಏಶ್ಯಕಪ್: ಸತತ 8ನೇ ಬಾರಿ ಫೈನಲ್ ತಲುಪಿದ ಭಾರತ

Update: 2022-10-13 07:53 GMT
Photo:twitter

ಹೊಸದಿಲ್ಲಿ: ಶೆಫಾಲಿ ವರ್ಮಾ(42 ರನ್, 28 ಎಸೆತ) ಹಾಗೂ ದೀಪ್ತಿ ಶರ್ಮಾ (3-7) ಅಮೋಘ ಆಟದ ನೆರವಿನಿಂದ  ಥಾಯ್ಲೆಂಡ್ ತಂಡವನ್ನು ಮಣಿಸಿದ ಭಾರತವು ಮಹಿಳಾ ಏಷ್ಯಾಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಸತತ 8 ನೇ ಬಾರಿಗೆ  ಫೈನಲ್ ತಲುಪಿದೆ.

 ಗುರುವಾರ ಸಿಲ್ಹಟ್ ನಲ್ಲಿ ನಡೆದ ಮೊದಲ ಸೆಮಿ ಫೈನಲ್  ಪಂದ್ಯದಲ್ಲಿ 20 ಓವರ್ ಗಳಲ್ಲಿ 8 ವಿಕೆಟಿಗೆ  148 ರನ್‌ ಗಳಿಸಿದ ಭಾರತ ಎದುರಾಳಿ ಥಾಯ್ಲೆಂಡ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟಿಗೆ  74 ರನ್ ಗೆ ನಿಯಂತ್ರಿಸಿತು.  74 ರನ್‌ಗಳಿಂದ ಸೋಲಿಸಿತು.

ಪಾಕಿಸ್ತಾನ ಹಾಗೂ  ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಭಾರತ ಶನಿವಾರ ಸಿಲ್ಹೆಟ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಎದುರಿಸಲಿದೆ.

ಮಹಿಳಾ ಏಶ್ಯ ಕಪ್‌  ಟೂರ್ನಮೆಂಟ್‌ನ ಎಲ್ಲಾ 8 ಆವೃತ್ತಿಗಳಲ್ಲಿ ಭಾರತ ಫೈನಲ್‌ಗೆ ತಲುಪಿದೆ.  7 ಬಾರಿ  ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಭಾರತವು  2018 ರ ಹಿಂದಿನ ಆವೃತ್ತಿಯ ಏಶ್ಯಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿತ್ತು.  ಆದರೆ ಗುಂಪು ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸೋಲಿಗೆ ಸೇಡು ತೀರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News