ಮಂಗಳೂರು: ಚೈಲ್ಡ್‌ಲೈನ್‌ನಿಂದ ಬಾಲ ಕಾರ್ಮಿಕೆಯ ರಕ್ಷಣೆ
Update: 2022-10-14 18:30 IST
ಮಂಗಳೂರು, ಅ.14: ದ.ಕ. ಜಿಲ್ಲೆಯ ಕೊಡಿಯಾಲ್ ಬಳಿ ವಸತಿ ಸಂಕೀರ್ಣವೊಂದರಲ್ಲಿ ಬಾಲ ಕಾರ್ಮಿಕಳಾಗಿ ದುಡಿಯುತ್ತಿದ್ದ 8 ವರ್ಷದ ಬಾಲಕಿಯನ್ನು ಚೈಲ್ಡ್‌ಲೈನ್ ಸಿಬ್ಬಂದಿ ರಕ್ಷಿಸಿ ಪುನರ್ವಸತಿ ಕಲ್ಪಿಸಿದ್ದಾರೆ.
ಸಾರ್ವಜನಿಕರಿಂದ ಚೈಲ್ಡ್‌ಲೈನ್‌ಗೆ ಬಂದ ಮಾಹಿತಿಯ ಅನ್ವಯ ಗುರವಾರ ಸಿಬ್ಬಂದಿ ಅಸುಂತಾ, ಪೂನಂ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯತೀಶ್, ಕದ್ರಿ ಪೊಲೀಸರು, ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಮಗುವಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಲಕಿ ಹಾಸನ ಜಿಲ್ಲೆಯ ನಿವಾಸಿಯಾಗಿರುವುದಾಗಿ ಚೈಲ್ಡ್‌ಲೈನ್ ಪ್ರಕಟನೆ ತಿಳಿಸಿದೆ.