ಮಹಮ್ಮದ್ ನದೀಮ್ ಗೆ ಅತ್ಯುತ್ತಮ ಕರಾಟೆ ಶಿಕ್ಷಕ ಪ್ರಶಸ್ತಿ
Update: 2022-10-15 15:02 IST
ಚಿನ್ನೈ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಮಹಮ್ಮದ್ ನದೀಮ್ ಗೆ ಅತ್ಯುತ್ತಮ ಕರಾಟೆ ಶಿಕ್ಷಕ ಪ್ರಶಸ್ತಿ ದೊರಕಿದೆ.
ಕರಾಟೆಯಲ್ಲಿ ಮಾಡಿದ ಸೇವೆ ಹಾಗೂ 28 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಅತ್ಯುತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಯನ್ನು ತೆಲಂಗಣ ರಾಜ್ಯಪಾಲರಾದ ಡಾ ತಮಿಳಿಸೈ ಸೌಂದರರಾಜನ್ ಅವರು ಮಹಮ್ಮದ್ ನದೀಮ್ ಅವರಿಗೆ ಇತ್ತೀಚೆಗೆ ತಾಜ್ ವಿಲ್ಲಿಂಗ್ಟನ್ ಮ್ಯೂಸ್, ಚೆನ್ನೈನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಕಾರ್ಯಕ್ರಮವನ್ನು ವರ್ಲ್ಡ್ ಕರಾಟೆ ಮಾಸ್ಟರ್ ಅಸೋಸಿಯೇಷನ್ ಆಯೋಜಿಸಿತು.