ಹಿದಾಯತ್ ನಗರ ಮದ್ರಸದಲ್ಲಿ ಮೀಲಾದ್ ಕಾರ್ಯಕ್ರಮ
ಕೋಟೆಕಾರ್: ಹಿದಾಯತ್ ನಗರದ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ಮಾಸದ ಅಂಗವಾಗಿ ಇಶ್ಕೇ ಮಿಲಾದ್ ಧಾರ್ಮಿಕ ಕಲಾ ಕಾರ್ಯಕ್ರಮ ರವಿವಾರ ಮಸೀದಿಯ ವಠಾರದಲ್ಲಿ ಮಸೀದಿಯ ಅಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಇಸ್ಮಾಯಿಲ್ ಸಖಾಫಿ ಬರುವ, ಮುನೀರ್ ಸಖಾಫಿ ಕೆಸಿ ರೋಡ್, ಸದರ್ ಮುಅಲ್ಲಿಂ ಹಸನ್ ಮದನಿ, ಮುಹದ್ಸಿನ್ ಶಫೀಕ್ ಹಾಶಿಮಿ, ಮಸೀದಿಯ ಉಪಾಧ್ಯಕ್ಷ ಕೆಎಂ ಅಬ್ದುಲ್ ಖಾದರ್, ಎಸ್‌ವೈಎಸ್ ಮುಝಮ್ಮಿಲ್ ಮದನಿ, ಕೋಶಾಧಿಕಾರಿ ಇಸ್ಮಾಯಿಲ್ ಹಿದಾಯತ್ ನಗರ, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ, ಸುಲೈಮಾನ್, ಮಸೀದಿಯ ಮಾಜಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಎಂಎಂ ಅಬ್ದುಲ್ಲ, ಎಸ್ಸೆಸ್ಸೆಫ್ ದಅವಾ ಶಬೀರ್ ಅಶ್‌ಹರಿ ಉಪಸ್ಥಿತರಿದ್ದರು.
ಶಫೀಕ್ ಹಾಶಿಮಿ ಸ್ವಾಗತಿಸಿದರು. ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು. ಜಾಬಿರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.