×
Ad

ಮಂಗಳೂರು: ಬಸ್ ಢಿಕ್ಕಿ; ಬಾಲಕ ಸ್ಥಳದಲ್ಲೇ ಮೃತ್ಯು

Update: 2022-10-17 16:57 IST

ಮಂಗಳೂರು, ಅ.17: ನಗರದ ಬಲ್ಲಾಲ್‌ಭಾಗ್ ಜಂಕ್ಷನ್ ಬಳಿ ಸ್ಕೂಟರ್‌ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ಬಾಲಕ ಬಸ್‌ನ ಚಕ್ರದಡಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತಪಟ್ಟ ಬಾಲಕನ್ನು ಪಡೀಲ್ ಸಮೀಪದ ಕೊಡಕ್ಕಲ್ ನಿವಾಸಿ ಕರುಣಾಕರ್‌ರ ಪುತ್ರ ರಕ್ಷಣ್ (13) ಎಂದು ಗುರುತಿಸಲಾಗಿದೆ.

ನಗರದ ಕಪಿತಾನಿಯೋ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ತನ್ನ ಸಂಬಂಧಿಕರಾದ ನಾರಾಯಣ ಅವರೊಂದಿಗೆ ಮಧ್ಯಾಹ್ನ 12ಕ್ಕೆ ಲೇಡಿಹಿಲ್‌ನಿಂದ ಲಾಲ್‌ಭಾಗ್ ಕಡೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಖಾಸಗಿ ಬಸ್ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಇದರಿಂದ ಸ್ಕೂಟರ್ ಸವಾರ ನಾರಾಯಣ ರಸ್ತೆಯ ಎಡಬದಿಗೆ ಬಿದ್ದರೆ, ರಕ್ಷಣ್ ಬಲಬದಿಗೆ ಬಿದ್ದಿದ್ದು, ಆತನ ಮೇಲೆ ಬಸ್‌ನ ಚಕ್ರ ಹರಿದು ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಸಂಚಾರ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News