BJPಯ ಪ್ರತಿ ನಡೆ ನಿರ್ಧಾರವಾಗುವುದು RSS ಗರ್ಭಗುಡಿಯಲ್ಲಿ: ದಿನೇಶ್ ಗುಂಡೂರಾವ್

Update: 2022-10-20 05:43 GMT

1
AICC ಅಧ್ಯಕ್ಷರಾಗಿ @kharge ಚುನಾಯಿತರಾಗಿರುವುದು ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವದ ಸಂಕೇತ.#Congress ‌ ನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಪದೇ ಪದೇ ಪ್ರಶ್ನಿಸುವ BJPಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ?

ಖರ್ಗೆ ಚುನಾವಣೆಯ ಮೂಲಕ ಅಧ್ಯಕ್ಷರಾಗಿದ್ದಾರೆ.

ಆದರೆ BJPಯ J.P.ನಡ್ಡಾ ಅಧ್ಯಕ್ಷರಾಗಿದ್ದು ಹೇಗೆ?

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 20, 2022

ಬೆಂಗಳೂರು: BJPಯಲ್ಲಿ ನೀತಿ ನಿರ್ಧಾರ ರೂಪಿಸುವ ಯಾವುದಾದರೂ ಆಯಕಟ್ಟಿನ ಜಾಗದಲ್ಲಿ ಶೋಷಿತ ಸಮುದಾಯದ ಪ್ರಾತಿನಿಧ್ಯವಿದೆಯೇ? BJPಯ ಪ್ರತಿ ನಡೆ ನಿರ್ಧಾರವಾಗುವುದು RSS ಗರ್ಭಗುಡಿಯಲ್ಲಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ''AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಚುನಾಯಿತರಾಗಿರುವುದು ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವದ ಸಂಕೇತ. #Congress ‌ ನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಪದೇ ಪದೇ ಪ್ರಶ್ನಿಸುವ BJPಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಖರ್ಗೆ ಚುನಾವಣೆಯ ಮೂಲಕ ಅಧ್ಯಕ್ಷರಾಗಿದ್ದಾರೆ. ಆದರೆ BJPಯ J.P.ನಡ್ಡಾ ಅಧ್ಯಕ್ಷರಾಗಿದ್ದು ಹೇಗೆ? '' ಎಂದು ಪ್ರಶ್ನೆ ಮಾಡಿದ್ದಾರೆ. 

''ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆಯವರ ಆಯ್ಕೆ ಕೇವಲ ಆಂತರಿಕ ಪ್ರಜಾಪ್ರಭುತ್ವ ಮಾತ್ರವಲ್ಲ, ಅದು ಸಾಮಾಜಿಕ ನ್ಯಾಯದ ಬಗ್ಗೆ ಪಕ್ಷ ಇಟ್ಟಿರುವ ಬದ್ಧತೆಯೂ ಕೂಡ ಹೌದು‌. ಆದರೆ BJPಯಲ್ಲಿ ‌ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ. ಕೇವಲ ಬೂಟಾಟಿಕೆಗೆ ಹಾಗೂ ತೋರಿಕೆಗೆ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುವುದು ಸಾಮಾಜಿಕ ನ್ಯಾಯವೇ?'' ಎಂದು ಕಿಡಿಕಾರಿದ್ದಾರೆ. 

''BJP, RSSನ ರಾಜಕೀಯ ಮುಖವಾಣಿ. ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಬಗ್ಗೆ ಪ್ರಶ್ನಿಸುವ BJP, RSS ಸರಸಂಘಚಾಲಕ ಸ್ಥಾನ ಒಂದೆ ಜಾತಿಗೆ ಯಾಕೆ ಸೀಮಿತ ಎಂದು ಹೇಳಲಿ'' ಎಂದು ದಿನೇಶ್ ಗುಂಡೂರಾವ್  ಸವಾಲು ಹಾಕಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News