ಬಲವಂತದ ವಾಪಸಾತಿ ಅಭಿಯಾನ: ಚೀನಾದ 7 ಪ್ರಜೆಗಳ ವಿರುದ್ಧ ಪ್ರಕರಣ ದಾಖಲು

Update: 2022-10-21 17:30 GMT

ನ್ಯೂಯಾರ್ಕ್, ಅ.21: ಅಮೆರಿಕ(America)ದ ಪ್ರಜೆಯೊಬ್ಬನನ್ನು ಬಲವಂತವಾಗಿ ಚೀನಾಕ್ಕೆ ವಾಪಸು ಕಳಿಸುವ ಅಭಿಯಾನದಲ್ಲಿ ಪಾಲ್ಗೊಂಡಿರುವ 7 ಚೀನಾ(China)ದ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಚೀನಾದಿಂದ ತೆರಳಿ ವಿದೇಶದ ನಾಗರಿಕರ ಸ್ಥಾನಮಾನ ಪಡೆದವರನ್ನು ಗುರುತಿಸಿ ಅವರನ್ನು ಚೀನಾಕ್ಕೆ ಮರಳಿಸುವ ಚೀನಾ ಸರಕಾರದ `ಆಪರೇಷನ್ ಫಾಕ್ಸ್ ಹಂಟ್'(``Operation Fox Hunt'') ಕಾರ್ಯಾಚರಣೆಯ ಭಾಗವಾಗಿ ನಡೆಯುವ ಅಂತರಾಷ್ಟ್ರೀಯ ಕಾನೂನುಬಾಹಿರ ವಾಪಸಾತಿ' ಅಭಿಯಾನಕ್ಕೆ ಸಂಬಂಧಿಸಿ 7 ಚೀನಾದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಮೆರಿಕ ಹೇಳಿದೆ.

2014ರಿಂದ ಚೀನಾದ  ಸುಮಾರು  10,000 ಪ್ರಜೆಗಳನ್ನು ಚೀನಾ ಸರಕಾರ ಬಲವಂತವಾಗಿ ವಾಪಾಸು ಕರೆಸಿಕೊಂಡಿದೆ ಎಂದು  ಸ್ಪೇನ್ ಮೂಲದ ಮಾನವ ಹಕ್ಕುಗಳ ಸಂಘಟನೆ `ಸೇಫ್ಗಾರ್ಡ್ ಡಿಫೆಂಡರ್ಸ್' (``Safeguard Defenders'')ಜನವರಿಯಲ್ಲಿ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ಚೀನಾ ನೇಮಿಸಿದ ಅಕ್ರಮ ವಾಪಸಾತಿ ತಂಡಗಳು ವಲಸಿಗರನ್ನು ಚೀನಾಕ್ಕೆ ಮರಳಿಸಲು ರಹಸ್ಯ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಆರೋಪ ದಾಖಲಿಸಲ್ಪಟ್ಟಿರುವ 7 ಮಂದಿ `ಜಾನ್ ಡೋ-1' (``John Doe-1'')ಎಂದು ಕರೆಯಲಾಗುವ ಗಣ್ಯ ಸಾಗರೋತ್ತರ ಚೀನೀ ವ್ಯಕ್ತಿಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅವರ ಮೇಲೆ ನಿಗಾ ವಹಿಸುವುದು, ಒತ್ತಡ ಹೇರುವ ಕಾರ್ಯ ನಡೆಸಿದ್ದಾರೆ  ಎಂದು ಅಮೆರಿಕದ ನ್ಯಾಯ ಇಲಾಖೆ ಹೇಳಿದೆ.

ಪ್ರತಿವಾದಿಗಳು ಪೀಪಲ್ಸ್ ರಿಪಬ್ಲಿಕ್ ಚೀನಾ ಸರಕಾರದ ಪರವಾಗಿ ಅಮೆರಿಕದ ನೆಲದಲ್ಲಿ ಏಕಪಕ್ಷೀಯ ಮತ್ತು ಹೊಂದಾಣಿಕೆಯಿಲ್ಲದ ಕಾನೂನು ಜಾರಿ ಕೃತ್ಯದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಸಾರ್ವಭೌಮತ್ವದ ಉಲ್ಲಂಘನೆಯ ಇಂತಹ ಅತಿರೇಕದ ಕ್ರಮಗಳನ್ನು ಅಮೆರಿಕ ದೃಢವಾಗಿ ಎದುರಿಸುತ್ತದೆ ಮತ್ತು ವಿದೇಶಿ ಆಡಳಿತದ ಕಾನೂನುಬಾಹಿರ ಏಜೆಂಟ್ಗಳಾಗಿ ಕಾರ್ಯ ನಿರ್ವಹಿಸುವವರನ್ನು ವಿಚಾರಣೆಗೆ ಒಳಪಡಿಸುತ್ತದೆ ಎಂದು ನ್ಯಾಯ ಇಲಾಖೆಯ ಅಧಿಕಾರಿ ಬ್ರೆವಾನ್ ಪೀಸ್ ಹೇಳಿದ್ದಾರೆ.

ಇದು ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯ ಭಾಗವಾಗಿದೆ. ಚೀನಾದಲ್ಲಿ ಭ್ರಷ್ಟಾಚಾರ ಎಸಗಿದ ಅಪರಾಧಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿರುವುದನ್ನು ಈ ತಂಡ ಪತ್ತೆ ಹಚ್ಚುತ್ತಿದೆ. ತನ್ನ ಕಾನೂನು ಜಾರಿ ಏಜೆನ್ಸಿಗಳು ವಿದೇಶದಲ್ಲಿ ಅಂತರಾಷ್ಟಿçÃಯ ಕಾನೂನನ್ನು ಪಾಲಿಸುತ್ತಿವೆ ಎಂದು ಚೀನಾ ಈ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News