ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ?: ಕಾಂಗ್ರೆಸ್‌ ಪ್ರಶ್ನೆ

Update: 2022-10-25 07:01 GMT

ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ#BJPvsBJP ಕದನದಲ್ಲಿ
ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ!

ಯತ್ನಳರ ಹಾವು ಯಾವುದು@BJP4Karnataka?
ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ? pic.twitter.com/OKvS1QmsK1

— Karnataka Congress (@INCKarnataka) October 25, 2022

ಬೆಂಗಳೂರು: ''ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ #BJPvsBJP ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ'' ಎಂದು ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಶಿಸ್ತಿನ ಪಕ್ಷ ಎಂದುಕೊಳ್ಳುವ @BJP4Karnataka ಕನಿಷ್ಠ ಪಕ್ಷ ಒಬ್ಬ ಯತ್ನಳರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ! ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿ.ಎಲ್ ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್‌ರದ್ದು' ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. 

ಇತ್ತೀಚೆಗೆ ತನ್ನದೇ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 'ನನ್ನ ತಂಟೆಗೆ ಬಂದರೆ ನಿಜವಾದ ಹಾವು ಬಿಡುತ್ತೇನೆ' ಎಂದು ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News