ದೇರಳಕಟ್ಟೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Update: 2022-10-27 17:44 GMT

ದೇರಳಕಟ್ಟೆ: ಹಳೇ ವಿದ್ಯಾರ್ಥಿ ಸಂಘ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ವತಿಯಿಂದ, ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಿಂದ ತೇರ್ಗಡೆ ಹೊಂದಿದ ಹಯಾತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಅಭಿನಂದನಾ ಕಾರ್ಯಕ್ರಮವು ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್  ಕಚೇರಿಯಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿರುವ ಬದ್ರಿಯಾ ಜುಮಾ ಮಸೀದಿ ಖತೀಬ್  ಇಸ್ಹಾಖ್ ಫೈಝಿ ಹಾಗೂ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ಹಳೇ ವಿದ್ಯಾರ್ಥಿ ಝುಬೈರ್ ಬದ್ಯಾರ್ ರವರಿಗೆ ಬೀಳ್ಕೊಡುಗೆ  ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿ ದೇರಳಕಟ್ಟೆ ಖತೀಬ್ ಇಸ್ಹಾಖ್ ಫೈಝಿ, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಆರ್ ಅಹ್ಮದ್ ಶೇಟ್, ಸದರ್ ಉಸ್ತಾದ್ ಅಬ್ದುಲ್ಲ ಫೈಝಿ, ಜಲಾಲ್ ಉಸ್ತಾದ್, ತಬೂಕ್ ದಾರಿಮಿ, ಯಾಕೂಬ್ ಬಾಖವಿ, ಬದ್ರಿಯಾ ಜಮಾಅತ್ ಆಡಳಿತ ಸಮಿತಿ ಸದಸ್ಯರಾದ ಅಝೀಝ್ ನಾಟೆಕಲ್, ಓಲ್ಡ್ ಸ್ಟೂಡೆಂಟ್ಸ್ ಅಧ್ಯಕ್ಷ ಡಿ. ಎ. ಅಶ್ರಫ್, ಉಪಾಧ್ಯಕ್ಷ ಕಲಂದರ್ ಶಾಫಿ, ಸ್ಥಾಪಕ ಅಧ್ಯಕ್ಷ ನಾಸಿರ್ ಒಮೆರಾ, ಮಾಜಿ ಅಧ್ಯಕ್ಷ ಯಾಸರ್, ಸದಸ್ಯರಾದ ಇಕ್ಬಾಲ್ ಎಚ್. ಆರ್, ಇಸಾಕ್, ರಫೀಕ್, ಶಕೀಲ್, ಸಿದ್ದೀಕ್, ಕಲಂದರ್, ಉಸ್ಮಾನ್ ಉಪಸ್ಥಿತರಿದ್ದರು. ಅಧ್ಯಕ್ಷ ಡಿ. ಎ ಅಶ್ರಫ್ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ನಾಸಿರ್ ವಂದಿಸಿದರು.

Similar News