ಕೊಣಾಜೆ ಆಟೋ ರಿಕ್ಷಾ ತಂಗುದಾಣ ಉದ್ಘಾಟನೆ
ಕೊಣಾಜೆ: ಅನೇಕ ತುರ್ತು ಸಂದರ್ಭದಲ್ಲಿ ಸಮಾಜದಲ್ಲಿ ರಿಕ್ಷಾ ಚಾಲಕರ ಪಾತ್ರ ಮಹತ್ತರವಾದುದು. ಕೊಣಾಜೆ ರಿಕ್ಷಾ ಚಾಲಕರ ಬೇಡಿಕೆಗೆ ಅನುಸಾರವಾಗಿ ಇಲ್ಲಿ ಸುಸಜ್ಜಿತವಾದ ರಿಕ್ಷಾ ತಂಗುದಾಣ ನಡುವೆ ನಿರ್ಮಿಸಲಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಕೊಣಾಜೆ ಜಂಕ್ಷನ್ ನಲ್ಲಿ ನಿರ್ಮಾಣಗೊಂಡ ನೂತನ ಆಟೋ ರಿಕ್ಷಾ ತಂಗುದಾಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ, ಮೂಡದ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಮುಖಂಡರಾದ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ಹಿರಿಯರಾದ ಬೂಬ ಗಟ್ಟಿ, ಕೊಣಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾದ ದೇವಣ್ಣ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಕೆ.ರಹಿಮಾನ್ , ಅಬ್ದುಲ್ ರಹಿಮಾನ್ ಕೋಡಿಜಾಲ್, ಪದ್ಮಾವತಿ, ಶೋಭಾ, ಪದ್ಮನಾಭ ಮುಟ್ಟಿಂಜ, ಅಂದುಚ್ಚ, ಹಸೈನಾರ್, ರುಕಿಯಾ, ಸಮೀರ್ ಪಜೀರ್, ಸಲೀಂ ಮೇಘ, ಹಿರಿಯರಾದ ಮುತ್ತು ಶೆಟ್ಟಿ, ಅಮೀರ್ ಕೊಣಾಜೆ, ಗುಲಾಬಿ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರು ಸೈಯ್ಯದ್ ಸಾಗರ್, ಪದಾಧಿಕಾರಿಗಳು ಭಾಗವಹಿಸಿದ್ದರು.
ಕೊಣಾಜೆ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಚ್ಯುತ ಗಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಹಿಮಾನ್ ಕೋಡಿಜಾಲ್ ವಂದಿಸಿದರು.