×
Ad

ನಟಿ ವಿನಯಾ ಪ್ರಸಾದ್ ಮನೆಯಿಂದ ನಗದು ಕಳವು

Update: 2022-10-30 13:13 IST

ಬೆಂಗಳೂರು, ಅ.30: ಬಹುಭಾಷಾ ಹಿರಿಯ ನಟಿ ವಿನಯಾ ಪ್ರಸಾದ್ ಮನೆಗೆ ನುಗ್ಗಿದ ಕಳ್ಳರು ನಗದು ಕಳವುಗೈದಿರುವ ಘಟನೆ ವರದಿ‌ಯಾಗಿದೆ.

ವಿನಯಾ ಪ್ರಸಾದ್ ಅವರು ಪತಿ ಜ್ಯೋತಿಪ್ರಕಾಶ್ ಜತೆ ನಟಿ ಅ.22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ತೆರಳಿದ್ದರು. ಈ ಅವಧಿಯಲ್ಲಿ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅ.26ರಂದು ಇವರು ಸಂಜೆ 4:30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಬಾಗಿಲು ಮೀಟಿ ಒಳಪ್ರವೇಶಿಸಿರುವ ಕಳ್ಳರು ಏಳು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ವಿನಯಾ ಪ್ರಸಾದ್ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Similar News