×
Ad

ಅಲ್‌ ಅಮೀನ್ ಚಾರಿಟೇಬಲ್ ಟ್ರಸ್ಟ್‌ನಿಂದ ರಕ್ತದಾನ ಶಿಬಿರ

Update: 2022-10-30 19:14 IST

ಮಂಗಳೂರು: ಅಲ್‌ ಅಮೀನ್ ಚಾರಿಟೇಬಲ್ ಟ್ರಸ್ಟ್ ಕಿನ್ಯ ಹಾಗೂ ಯೆನೆಪೊಯ ಮೆಡಿಕಲ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಸಹಬಾಗಿತ್ವದಲ್ಲಿ ಸಂಸ್ಥೆಯ ಕಚೇರಿಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.

ದ.ಕ.ಜಿಲ್ಲಾ ಆಯುಷ್ಮಾನ್ ಅಧಿಕಾರಿ ಡಾ. ಇಕ್ಬಾಲ್ ಕಿನ್ಯಾ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ಕಿನ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಬ್ರಾಹೀಂ ಬಾತಿಷ್ ತಂಙಳ್ ಕಿನ್ಯಾ ದುಆಗೈದರು. 50ನೇ ಬಾರಿ ರಕ್ತದಾನಗೈದ ದೇರಳಕಟ್ಟೆಯ ಮೆಲ್ವಿನ್ ಡೈಸ್ ಅವರನ್ನು ಶಾಸಕ ಯು.ಟಿ.ಖಾದರ್ ಸನ್ಮಾನಿಸಿದರು.

ಈ ಸಂದರ್ಭ ಯೆನೆಪೊಯ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ರಾಹುಲ್ ರಾಮನುಜಂ, ಸೈಯದ್ ಶಿಹಾಬುದ್ಧೀನ್ ತಂಳ್ ಕಿನ್ಯ, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಕಿನ್ಯಾ ಗ್ರಾಪಂ ಪಿಡಿಒ ವಿಶ್ವನಾಥ್, ಕಿನ್ಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಸ್ಮಾಯಿಲ್, ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಕೋಶಾಧಿಕಾರಿ ಹಾಜಿ ಅಬೂಸ್ವಾಲಿಹ್, ಉಕ್ಕುಡ ರಿಫಾಯಿಯ್ಯ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ, ಹಾಜಿ ಅಬೂಬಕ್ಕರ್ ಮಜಲ್, ಗೋಲ್ಡನ್ ವೇಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ವೂಸಾ ಅಬ್ಬಾಸ್, ಎನ್.ಕೆ.ಮುಹಮ್ಮದ್, ಕಿನ್ಯ ಗ್ರಾಪಂ ಸದಸ್ಯರಾದ ಸಿರಾಜುದ್ಧೀನ್ ಕಿನ್ಯ, ಫಯಾಝ್, ಸೈಯದ್ ತ್ವಾಹಾ ತಂಳ್, ನಝೀರ್ ಹುಸೈನ್, ಸಂತೋಷ್ ಕುಮಾರ್ ಮೊಂತೇರೊ, ತಬೂಕ್ ದಾರಿಮಿ ಉಪಸ್ಥಿತರಿದ್ದರು.

ಅಬ್ದುಲ್ ಗಫೂರ್ ಕಿರಾಅತ್ ಪಠಿಸಿದರು. ಅಬ್ದುಲ್ ಖಾದರ್ ಮಜಲ್ ಸ್ವಾಗತಿಸಿದರು. ಶೇಖ್ ಇಬ್ರಾಹಿಂ ವಂದಿಸಿದರು. ಅಶ್ರಫ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

Similar News