ಪಡುಬಿದ್ರೆ: ಪಿಯು ಕಾಲೇಜಿಗೆ ನುಗ್ಗಿ ಕಳವಿಗೆ ಯತ್ನ; ಪ್ರಕರಣ ದಾಖಲು
Update: 2022-10-30 19:24 IST
ಪಡುಬಿದ್ರೆ: ಮುದರಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ನುಗ್ಗಿದ ದುಷ್ಕರ್ಮಿಗಳು ಕಳವಿಗೆ ಯತ್ನಿಸಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ದೂರು ನೀಡಿದ್ದು, ಶಾಲಾ ಕಚೇರಿಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳಗಿದ್ದ ಕಪಾಟುಗಳ ಬೀಗವನ್ನು ಮುರಿದಿದ್ದಾರೆ. ಕಪಾಟಿನಲ್ಲಿದ್ದ ದಾಖಲೆಗಳು, ಕಾಗದಪತ್ರ ಮತ್ತು ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.