×
Ad

ಪರಸ್ಪರ ದ್ವೇಷವಿಲ್ಲದೆ ನ್ಯಾಯದ ದಾರಿಯಲ್ಲಿ ಬದುಕುವ ಸಂದೇಶವನ್ನು ರಂಗ ಭೂಮಿ ಸಮರ್ಥವಾಗಿ ನೀಡುತ್ತದೆ: ಶಶಿಧರ ಬಾರಿಘಾಟ್

Update: 2022-10-30 20:11 IST

ಮಂಗಳೂರು, ಅ.30; ಪರಸ್ಪರ ದ್ವೇಷ ಅಸೂಯೆ ತಿರಸ್ಕಾರ ಗಳಿಲ್ಲದೆ ಪ್ರಜಾತಂತ್ರ ವ್ಯವಸ್ಥೆ ಯಲ್ಲಿ ಸಂವಿಧಾನದ  ಆಶಯದಂತೆ ನ್ಯಾಯದ ದಾರಿಯಲ್ಲಿ ಬದುಕುವ ಸಂದೇಶವನ್ನು ರಂಗಭೂಮಿ ಅದ್ಭುತವಾಗಿ  ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹಿರಿಯ ರಂಗ ಕರ್ಮಿ ಶಶಿ ಧರ್ ಬಾರಿ ಘಾಟ್ ತಿಳಿಸಿದ್ದಾರೆ.

ಅವರು ಇಂದು ನಗರದ ಶಾರದಾ ವಿದ್ಯಾಲಯದಲ್ಲಿಂದು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಮತ್ತು ರಂಗಭೂಮಿ ಗೋಷ್ಠಿಯಲ್ಲಿ ರಂಗ ಭೂಮಿ ಮತ್ತು ಯುವ ಜನತೆ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದರು.

ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವಿದೆ. ದುರಾಸೆ, ದ್ವೇಷ, ಅಸೂಯೆ ತಿರಸ್ಕಾರ ನಾವು ಬದುಕುವ ದಾರಿಯನ್ನು ತಪ್ಪುವಂತೆ ಮಾಡಿದೆ. ಸಾಮಾಜಿಕ ಬದಲಾವಣೆಗೆ ಯುವಕರು ರಂಗಭೂಮಿ ಬಳಸಿಕೊಳ್ಳಬೇಕಾಗಿದೆ. ರಂಗ ಭೂಮಿ ಯುವಜನರಲ್ಲಿ ಧೈರ್ಯ, ಸ್ಥೈರ್ಯ ವನ್ನು ಮೂಡಿಸಬಹುದು. ಆದರೆ ಇಂದಿನ ಯುವ ಜನರು ರಂಗ ಭೂಮಿಯಲ್ಲಿ ಬೆಳೆಯಲು ಭಾಷಾ ಮಾಧ್ಯಮ ಸೇರಿದಂತೆ  ಕೆಲವು ಕೌಶಲ್ಯ ಗಳನ್ನು ಮೈಗೂಡಿಸಿ ಕೊಂಡು ಬೆಳೆಯಬೇಕಾಗಿದೆ. ಪರಸ್ಪರ ನೆರವು ನೆರವು ನೀಡುವ ಮನೋಭಾವ ಯುವಕರಲ್ಲಿ ಬೆಳೆಸಲು ರಂಗಭೂಮಿ ಪರಿಣಾಮಕಾರಿ. ರಂಗಭೂಮಿ ಯುವಜನ ರನ್ನು ಹೆಚ್ಚು ಅವಲಂಬಿಸಿ ಅವರ ಮೇಲೆ ನಿಂತಿದೆ ಎಂದು ಶಶಿಧರ ಬಾರಿಘಾಟ್ ತಿಳಿಸಿದ್ದಾರೆ.

ರವಿರಾಜ್  ಎಸ್ ರವರು ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ವಿಚಾರ ಮಂಡಿಸಿದರು. ಅಕ್ಷಯ ಆರ್ ಶೆಟ್ಟಿ ತುಳು ರಂಗ ಭೂಮಿ ಬೆಳೆದು ಬಂದ ಬಗ್ಗೆ ವಿಚಾರ ಮಂಡಿಸಿ ತುಳು ರಂಗ ಭೂಮಿಯಲ್ಲಿ ತುಳುನಾಡಿನ ಧಾರ್ಮಿಕ ಆಚರಣೆಗಳ ಪ್ರಭಾವ ಇದೆ ಎಂದರು.

ಸಾಹಿತಿ ಅರವಿಂದ ಚೊಕ್ಕಾಡಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸುಮಾರು 300 -400 ವರ್ಷಗಳ ಹಿಂದೆ ಭಾರತೀಯ ರಂಗ ಭೂಮಿ ಯನ್ನು ಪ್ರವೇಶಿಸಿದ ಪಾರ್ಸಿ ರಂಗನಾಟಕಗಳ ಪ್ರಭಾವ ತುಳು ರಂಗಭೂ ಮಿಯ ಮೇಲಿದೆ ಪಾರ್ಸಿ ನಾಟಕಗಳಲ್ಲೂ ಪ್ರಧಾನವಾದ  ಹಾಸ್ಯ ತುಳು ರಂಗ ಭೂಮಿ ಯಲ್ಲೂ ಕಂಡು ಬರುತ್ತದೆ ಎಂದರು.

ಗೋಷ್ಠಿಯಲ್ಲಿ ದಯಾನಂದ ಕಟೀಲ್ ಸ್ವಾಗತಿಸಿ, ಯಶೋಧ ವಂದಿಸಿದರು. ಮುರಳೀಧರ ಬಾರಧ್ವಜ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಧ್ಯಕ್ಷ ಡಾ.ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

Similar News