×
Ad

'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ: ಸಿದ್ದರಾಮಯ್ಯ

Update: 2022-11-01 14:37 IST

ಬೆಂಗಳೂರು, ನ.1: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಸಂಜೆ (ಮಂಗಳವಾರ) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಮಾರಂಭಕ್ಕೆ ನನಗೆ ಆಹ್ವಾನವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ''ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದಾರೆ. ಶಿಷ್ಟಾಚಾರದಂತೆ ವಿರೋಧ ಪಕ್ಷದ ನಾಯಕರನ್ನ ಆಹ್ವಾನಿಸಬೇಕಿತ್ತು. ಅವರು ಬಂದು ಕರೆದಿದ್ದರೆ ಕಾರ್ಯಕ್ರಮಕ್ಕೆ ಹೋಗೋಣ ಅಂತಿದ್ದೆ. ನನ್ನನ್ನು ಆಹ್ವಾನಿಸದಿರುವುದರಿಂದ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ'' ಎಂದು ತಿಳಿಸಿದರು.

''ಪುನೀತ್ ರಾಜ್ ಕುಮಾರ್  ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸವಾಗಿದೆ. ಆದರೆ ಮೊದಲೇ ಬಂದು ನನ್ನನ್ನು ಕಾರ್ಯಕ್ರಮಕ್ಕೆ ಕರೆದಿದ್ದರೆ ಹೋಗುತ್ತಿದ್ದೆ'' ಎಂದು ಹೇಳಿದರು. 

ಇದನ್ನೂ ಓದಿ: ಇಂದು ಸಂಜೆ ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ಬೆಂಗಳೂರಿಗೆ ಆಗಮಿಸಿದ ನಟ ರಜನಿಕಾಂತ್

Similar News