×
Ad

ಕುವೈತ್-ಬೆಂಗಳೂರು ವಿಮಾನ ಪ್ರಯಾಣ ಆರಂಭಿಸಿದ ಜಝೀರಾ ಏರ್ ವೇಸ್

Update: 2022-11-01 18:18 IST

ಬೆಂಗಳೂರು, ನ. 1: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ವಾರಕ್ಕೆ ಎರಡು ವಿಮಾನಗಳು ಓಡಾಡಲಿವೆ ಎಂದು ಜಝೀರಾ ಏರ್ ವೇಸ್ (Jazeera Airways) ತಿಳಿಸಿದೆ. 

ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಏರ್ ವೇಸ್ ಉಪಾಧ್ಯಕ್ಯ ಭರತನ್ ರವೀಂದ್ರನ್, ದೇಶದ ಪ್ರಮುಖ ಆರು ವಿಮಾನ ನಿಲ್ದಾಣಗಳಲ್ಲಿ ಏರ್‍ವೇಸ್ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಕಾಲಘಟ್ಟದಲ್ಲಿ ಯಶಸ್ವಿಯಾಗಿ ಭಾರತೀಯರನ್ನು ವಿದೇಶದಿಂದ ಕರೆತಂದಿದೆ. ಈಗ ನ.3ರಿಂದ ಬೆಂಗಳೂರಿನಿಂದ ಕುವೈತ್‍ಗೆ ಇಸ್ತಾಂಬುಲ್, ಬಾಕು, ಟಿಬಿಲಿಸಿ, ಕೈರೋ, ಅಮ್ಮನ್, ಜಿದ್ದಾ, ಮದೀನಾ, ರಿಯಾದ್, ದಮ್ಮಾಮ್, ಅಭಾ, ಕಾಸಿಮ್ ಮತ್ತು ದುಬೈ ಮಾರ್ಗವಾಗಿ ಸಂಚರಿಸಲಿದೆ ಎಂದರು. 

ಬೆಂಗಳೂರಿನಿಂದ ಕುವೈತ್‍ಗೆ ಶುಕ್ರವಾರ, ರವಿವಾರ ಮಧ್ಯಾಹ್ನ 2 ಗಂಟೆಗೆ ಹೊರಡುತ್ತವೆ. ಕುವೈತ್‍ನಿಂದ ಬೆಂಗಳೂರಿಗೆ ಜಜೀರಾ ಏರ್‍ವೇಸ್‍ನ ವಿಮಾನಗಳು ಗುರುವಾರ, ಶನಿವಾರ ಸಂಜೆ 5:55ಕ್ಕೆ ಹೊರಡುತ್ತವೆ ಎಂದು ಅವರು ಮಾಹಿತಿ ನೀಡಿದರು.

Similar News