ಕೋವಿಡ್ ನಿಂದ ವಿಮಾನ ಹಾರಾಟ ರದ್ದು: ಗ್ರಾಹಕರಿಗೆ ಹಣ ಪಾವತಿಗೆ ಆಯೋಗ ಆದೇಶ

Update: 2022-11-03 15:22 GMT

ಬೆಂಗಳೂರು, ನ.3: ಕೊರೋನದಿಂದ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಬೆಂಗಳೂರಿನಿಂದ ಇಂಗ್ಲೆಂಡ್ ದೇಶಕ್ಕೆ ತೆರಳಬೇಕಿದ್ದ ವಿಮಾನ ರದ್ದು ಮಾಡಿದ್ದಾಗ ಬಾಕಿ ಉಳಿಸಿಕೊಂಡಿದ್ದ ಒಟ್ಟು 49,029 ರೂ. ಗಳನ್ನು ದೂರುದಾರ ಗ್ರಾಹಕರಿಗೆ ಪಾವತಿಸುವಂತೆ ಏರ್ ಇಂಡಿಯಾಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.     

ನಗರದ ಮಿಲಿನ್ ಜಗದೀಶ್ ಭಾಯ್ ಪರೇಖ್ ಸಲ್ಲಿಸಿದ್ದ ದೂರನ್ನು ನಗರದ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಪೀಠವು ಮಾನ್ಯ ಮಾಡಿದೆ. 

ವಿಮಾನ ಹಾರಾಟ ರದ್ದುಪಡಿಸಿದಾಗ ಬಾಕಿ ಹಣವನ್ನು ತನ್ನ ಹತ್ತಿರ ಉಳಿಸಿಕೊಳ್ಳುವ ಹಕ್ಕು ಏರ್ ಇಂಡಿಯಾ ಸಂಸ್ಥೆಗೆ ಇಲ್ಲ. ಈ ಸಂಸ್ಥೆಯ ನಡೆಯು ಸೇವಾ ನ್ಯೂನತೆಯಾಗಿದೆ. ದೂರುದಾರರಾದ ಜಗದೀಶ್ ಭಾಯ್ ಪರೇಖ್ ಸಲ್ಲಿಸಿರುವ ದಾಖಲೆಗಳು ಏರ್ ಇಂಡಿಯಾದ ಸೇವಾ ನ್ಯೂನತೆಯನ್ನು ಸಾಬೀತುಪಡಿಸಿವೆ ಎಂದು ತನ್ನ ಆದೇಶದಲ್ಲಿ ಪ್ರಕಟಿಸಿದೆ. 

Similar News