×
Ad

ವಿಟ್ಲ: ಹೊರೈಝನ್ ಶಾಲೆಯಲ್ಲಿ ಮೀಲಾದ್ ಫೆಸ್ಟ್

Update: 2022-11-06 10:37 IST

ವಿಟ್ಲ, ನ.6: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಮೀಲಾದ್ ಫೆಸ್ಟ್ ಅಧ್ಯಕ್ಷ ಝುಬೈರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆಯಿತು.

  ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಬುರ್ದಾ, ದಫ್  ಮೊದಲಾದ ಕಾರ್ಯಕ್ರಮಗಳು ನಡೆದವು.

ಮಸೀದಿಯ ಖತೀಬ್ ಮುಹಮ್ಮದ್ ನಸೀಹ್ ದಾರಿಮಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ಅಬೂಬಕರ್ ನೋಟರಿ, ಸಂಚಾಲಕ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್,  ಕೋಶಾಧಿಕಾರಿ ವಿ.ಎಚ್.ಅಶ್ರಫ್, ಮೇಲ್ವಿಚಾರಕ  ಗಫೂರ್  ಪೊನ್ನೊಟು , ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ದೀಪಕ್, ಅಂದುಞಿ ಗಮಿ, ಇಕ್ಬಾಲ್ ಮೇಗಿನಪೇಟೆ, ಅಬ್ದುಲ್ ಅಝೀಝ್ ಹಳೆಮನೆ, ಮುಸ್ತಫ ಖಲಿಲ್, ಅಬ್ದುಲ್ ರಹಿಮಾನ್ ದೀಪಕ್, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಮಸೀದಿಯ ಅಧ್ಯಕ್ಷ ಇಕ್ಬಾಲ್ ಶೀತಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಇಸ್ಮಾಯೀಲ್ ಪರ್ತಿಪ್ಪಾಡಿ, ಸದರ್ ಉಮರ್ ಸ‌ಅದಿ ಮುಂತಾದದವರು  ಉಪಸ್ಥಿತರಿದ್ದರು.

ಉಮರ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Similar News