'ಭಾರತ್‌ ಜೋಡೊ' ಟ್ವಿಟರ್‌ ಖಾತೆಗಳಿಗೆ ಕೋರ್ಟ್‌ ನಿಂದ ನಿರ್ಬಂಧ: ಕಾಂಗ್ರೆಸ್‌ ಪ್ರತಿಕ್ರಿಯೆ

KGF-2 ಧ್ವನಿ ದಾಖಲೆ ಬಳಸಿದ ಆರೋಪ

Update: 2022-11-07 16:47 GMT

ಬೆಂಗಳೂರು: 'ಕಾಂಗ್ರೆಸ್‌' ಹಾಗೂ 'ಭಾರತ್‌ ಜೋಡೊ' ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಿರುವ ಬೆಂಗಳೂರು ನ್ಯಾಯಾಲಯದ ಆದೇಶದ ಕುರಿತು ಕಾಂಗ್ರೆಸ್‌  ಪ್ರತಿಕ್ರಿಯಿಸಿದೆ. 

“INC ಮತ್ತು BJY SM ಹ್ಯಾಂಡಲ್‌ಗಳ ವಿರುದ್ಧ ಬೆಂಗಳೂರು ನ್ಯಾಯಾಲಯದಿಂದ ಪ್ರತಿಕೂಲ ಆದೇಶದ ಕುರಿತು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ. ನ್ಯಾಯಾಲಯದ ಕಲಾಪಗಳ ಬಗ್ಗೆ ನಮಗೆ ತಿಳಿದಿರಲಿಲ್ಲ (ಹಾಗಾಗಿ) ಹಾಜರಿರಲಿಲ್ಲ. (ನಮಗೆ) ಆದೇಶದ ಪ್ರತಿ ಬಂದಿಲ್ಲ. ನಾವು ಎಲ್ಲಾ ಕಾನೂನು ಪರಿಹಾರಗಳನ್ನು ನೋಡುತ್ತಿದ್ದೇವೆ.” ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದೆ.

MRT Music ಮಾಲಕತ್ವದ ಕಾಪಿರೈಟ್ಸ್ ಉಲ್ಲಂಘಿಸಿದ ಮತ್ತು KGF -2 ಚಿತ್ರದ ಧ್ವನಿ ದಾಖಲೆಯನ್ನು ಅಕ್ರಮವಾಗಿ ಬಳಸಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ 'ಕಾಂಗ್ರೆಸ್' ಮತ್ತು 'ಭಾರತ್ ಜೋಡೊ'ದ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯವು ಟ್ವಿಟರ್‌ (Twitter INC) ಗೆ ನಿರ್ದೇಶನ ನೀಡಿದೆ.  

Similar News