ಶಾರ್ಜಾ ಅಂತರ್‌ ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ

Update: 2022-11-08 16:42 GMT

ಶಾರ್ಜಾ : ಕನ್ನಡ ಭಾಷೆಯನ್ನು ಪ್ರತಿನಿಧಿಸಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ಪುಸ್ತಕ ಮಳಿಗೆ ಶಾಂತಿ ಪ್ರಕಾಶನದ ಉದ್ಘಾಟನಾ ಸಮಾರಂಭ ಶಾರ್ಜಾ ಎಕ್ಸ್ ಪೋ ಸೆಂಟರ್‌ನಲ್ಲಿ ನಡೆಯಿತು.

ಮಳಿಗೆಯ ಉದ್ಘಾಟನೆಯನ್ನು ಉದ್ಯಮಿ, ಸ್ಪ್ರೇ ಟೆಕ್ ಕೋಟಿಂಗ್ ಆ್ಯಂಡ್ ಕಾಂಟ್ರಾಕ್ಟಿಂಗ್‌ನ ವ್ಯವಸ್ಥಾಪಕ ರಾಮಚಂದ್ರ ಹೆಗಡೆ ನಿರ್ವಹಿಸಿದರು.

ಲೇಖಕಿ ಕುಲ್ಸೂಮ್ ಅಬೂಬಕರ್ ಬರೆದ ಶಾಂತಿ ಪ್ರಕಾಶನದ ‘ಹಿಜಾಬ್’ ಕೃತಿಯನ್ನು  ದುಬೈ ಪಂಚಕರ್ಮ ಆಯುರ್ವೇದ ಕೇಂದ್ರದ ಮೆಡಿಕಲ್ ಡೈರೆಕ್ಟರ್ ಡಾ.ಮಮತಾ ರೆಡ್ಡೆರ್ ಅವರು ರೇಡಿಯೊ ಖುಷಿಯ ಕನ್ನಡ ನಿರೂಪಕಿ ಆರ್.ಜೆ. ಕೃತಿಕಾರಿಗೆ ನೀಡುವ ಮೂಲಕ ಮತ್ತು ‘ಪ್ರವಾದಿ ಮುಹಮ್ಮದ್(ಸ) ರವರ ವಿವಾಹಗಳು ಮತ್ತು ವಿಮರ್ಶೆಗಳು’ ಎಂಬ ಪುಸ್ತಕವನ್ನು ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಸಲೀಮ್ ಅವರು ‘ದುಬೈ ಹೆಮ್ಮೆಯ ಕನ್ನಡಿಗರು’ ಸಂಸ್ಥೆಯ  ಸದಸ್ಯೆ ಹಾದಿಯಾ ಮಂಡ್ಯರಿಗೆ ನೀಡಿ ಲೋಕಾರ್ಪಣೆಗೊಳಿಸಿದರು.

ನೋಯೆಲ್ ಡಿ.ಅಲ್ಮೇಡ ಮಾತನಾಡಿದರು. ಅಬ್ದುಲ್ ಸಲಾಂ ದೇರಳಕಟ್ಟೆ ಕುರ್‌ಆನ್ ಪಡಿಸಿಡಿದರು. ಆಸಿಫ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಖಾದರ್ ಕುಕ್ಕಾಜೆ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ನಿಸಾರ್ ವಂದಿಸಿರು.

Similar News