ಉಡುಪಿ: ಓವರ್‌ಬ್ರಿಡ್ಜ್ ಕಾಮಗಾರಿ ಹಿನ್ನೆಲೆ ಕೊಂಕಣ ರೈಲು ಸಂಚಾರದಲ್ಲಿ ವ್ಯತ್ಯಯ

Update: 2022-11-11 13:56 GMT

ಉಡುಪಿ: ಮುಂಬಯಿಯಲ್ಲಿ ಮುಂಬಯಿ ಸಿಎಸ್‌ಎಂಟಿ ಹಾಗೂ ಮಸೀದ್ ಸ್ಟೇಶನ್ ನಡುವಿನ ಕಾರ್ನಿಕ್ ರೋಡ್ ಓವರ್‌ಬ್ರಿಡ್ಜ್ ನ್ನು ಕೆಡವುವ ಕಾಮಗಾರಿಯನ್ನು ನ.19 ಮತ್ತು 20ರಂದು ಕೈಗೊಳ್ಳಲು ಸೆಂಟ್ರಲ್ ರೈಲ್ವೆ ನಿರ್ಧರಿಸಿರುವುದರಿಂದ ಕೊಂಕಣ ರೈಲ್ವೆಯ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ.12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ನ.19 ಶನಿವಾರದ ಪ್ರಯಾಣ ಪನ್ವೇಲ್ ನಿಲ್ದಾಣದಲ್ಲಿ ಕೊನೆ ಗೊಳ್ಳಲಿದೆ. ಅದೇ ರೀತಿ ರೈಲು ನಂ.12133 ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ನ.20 ರವಿವಾರದ ಪ್ರಯಾಣ ಪನ್ವೇಲ್ ನಿಲ್ದಾಣದಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Similar News