×
Ad

ಮಂಗಳೂರು: ಬೈಕ್ ರ‍್ಯಾಲಿಗೆ ಮುಂದಾದ ಡಿವೈಎಫ್‌ಐ ಕಾರ್ಯಕರ್ತರು ವಶಕ್ಕೆ

Update: 2022-11-14 16:45 IST

ಮಂಗಳೂರು, ನ.14: ಸುರತ್ಕಲ್ ಟೋಲ್‌ಗೇಟ್ ರದ್ದುಗೊಳಿಸುವಂತೆ ಆಗ್ರಹಿಸಿ ನಡೆಯುವ ರಾತ್ರಿ ಹಗಲ ಧರಣಿಗೆ ಬೆಂಬಲ ಸೂಚಿಸಿ ನಗರದ ಉರ್ವಸ್ಟೋರ್‌ನಿಂದ ಸುರತ್ಕಲ್‌ಗೆ ಬೈಕ್ ರ‍್ಯಾಲಿ ನಡೆಸಲು ಮುಂದಾದ ಡಿವೈಎಫ್‌ಐ ಕಾರ್ಯಕರ್ತರನ್ನು ಉರ್ವ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ನಡೆದಿದೆ.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಲು ಮುಂದಾದ ವೇಳೆ ಪೊಲೀಸರು ಅವಕಾಶ ನಿರಾಕರಿಸಿದರು. ಅಲ್ಲದೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣ ಪೊಲೀಸರು ನಾಯಕರ ಸಹಿತ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು, ರ‍್ಯಾಲಿಗೆ ತಡೆಯೊಡ್ಡಿದರು.

Full View

Similar News