ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ರೋಹಿತ್ ಭಾತಿ ಅಪಘಾತದಲ್ಲಿ ಮೃತ್ಯು

Update: 2022-11-22 03:03 GMT

ನೋಯ್ಡಾ: ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ರೋಹಿತ್ ಭಾತಿ (Social Media Influencer Rohit Bhati) ಸೋಮವಾರ ಗ್ರೇಟರ್ ನೋಯ್ಡಾ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅವರು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಅವರ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ರೌಡಿ ಭಾತಿ (Rowdy Bhati) ಎಂದು ಪರಿಚಿತರಾಗಿದ್ದ ರೋಹಿತ್ ಭಾತಿ, ಅಪಘಾತದಲ್ಲಿ ಮೃತಪಟ್ಟರೆ, ಅವರ ಇಬ್ಬರು ಸ್ನೇಹಿತರಿಗೆ ಗ್ರೇಟರ್ ನೋಯ್ಡಾ ಹಾಗೂ ದೆಹಲಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಮೋಜಿನ ಕೂಟವೊಂದರಿಂದ ಆಗಮಿಸುತ್ತಿದ್ದ ವೇಳೆ ಅಂದರೆ ಮುಂಜಾನೆ 3 ಗಂಟೆಯ ಸುಮಾರಿಗೆ ಚುಹಾದ್‍ಪುರ ಅಂಡರ್‌ಪಾಸ್ ಬಳಿ ಈ ಘಟನೆ ನಡೆದಿದೆ. ರಭಸವಾಗಿ ಅತಿವೇಗದಿಂದ ಬರುತ್ತಿದ್ದ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೇ ಅದು ಮರಕ್ಕೆ ಢಿಕ್ಕಿ ಹೊಡೆಯಿತು ಎಂದು ಸ್ಥಳೀಯ ಠಾಣೆಯ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.

ರೋಹಿತ್ ಭಾತಿ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಜನಪ್ರಿಯರಾಗಿದ್ದರು ಎಂದು ndtv.com ವರದಿ ಮಾಡಿದೆ.

Similar News