×
Ad

​ಮಂಗಳೂರು: ಇಬ್ಬರು ಮಕ್ಕಳ ಸಹಿತ ಮಹಿಳೆ ನಾಪತ್ತೆ

Update: 2022-11-23 22:18 IST

ಮಂಗಳೂರು: ಚರ್ಚ್‌ಗೆ ಹೋಗಿ ಬರುವುದಾಗಿ ತಿಳಿಸಿದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಧಿಕಾ (26) ಮತ್ತು ಆಕೆಯ ಇಬ್ಬರು ಮಕ್ಕಳು ನಾಪತ್ತೆಯಾದವರು.

ರಾಧಿಕಾ ನ.13ರಂದು ಮಧ್ಯಾಹ್ನ 12ಕ್ಕೆ ತನ್ನ ತಂದೆಯಲ್ಲಿ ಚರ್ಚ್‌ಗೆ ಹೋಗಿ ಬರುವುದಾಗಿ ತಿಳಿಸಿ ಆಕೆಯ ಇಬ್ಬರು ಮಕ್ಕಳೊಂದಿಗೆ ತೆರಳಿದ್ದರು.  ರಾತ್ರಿ 9ಕ್ಕೆ ತಂದೆ ಮಗಳಿಗೆ ಕರೆ ಮಾಡಿದಾಗ ಮಕ್ಕಳೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದು, ನ.15ರಂದು ಬರುವುದಾಗಿ ತಿಳಿಸಿದ್ದರು. ಆದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಸಂಬಂಧಿಕರು ಮತ್ತು ಆಕೆ ಕೆಲಸ ಮಾಡುತ್ತಿದ್ದ ಸ್ಥಳ ಹಾಗೂ ನಗರದ ಚರ್ಚ್‌ನಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News