ನೆಲಮಂಗಲ; ರೈಲ್ವೆ ಹಳಿಗಳ ಮೇಲೆ ಯುವಕ- ಯುವತಿಯ ಮೃತದೇಹ ಪತ್ತೆ

Update: 2022-11-24 06:48 GMT

ನೆಲಮಂಗಲ (ಬೆಂಗಳೂರು ): ರೈಲ್ವೆ ಹಳಿಗಳ ಮೇಲೆ ಯುವಕ ಹಾಗೂ ಯುವತಿಯ ಮೃತದೇಹ ಪತ್ತೆಯಾಗಿರುವುದು ಇಲ್ಲಿನ ಹುಸ್ಕೂರು ಗ್ರಾಮದ ಬಳಿ ವರದಿಯಾಗಿದೆ. 

ಮೃತ ಯುವಕನನ್ನು ನಾಗೇಂದ್ರ (21) ಎಂದು ಗುರುತಿಸಲಾಗಿದ್ದು, ಯುವತಿಯ ಬಗ್ಗೆ ಮಾಹಿತಿ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. 

ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ರೈಲ್ವೆ ನಿಲ್ದಾಣದ ಸಮೀಪ ಇಬ್ಬರ ಮೃತದೇಹ ಪತ್ತೆಯಾಗಿದೆನ್ನಲಾಗಿದೆ. 

ಇದನ್ನೂ ಓದಿ: ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಂದ ಪ್ರಮಾಣ ಮಾಡಿಸಿದ ಸಿಎಂ ಬೊಮ್ಮಾಯಿ

Similar News