ಉಳ್ಳಾಲ: ತಾಲೂಕು ಮಟ್ಟದ ಜಾಥಾ, ಮಹಿಳಾ ಸಮಾವೇಶ

Update: 2022-11-24 06:18 GMT

ಉಳ್ಳಾಲ: ಡೀಡ್ಸ್ ಮಂಗಳೂರು ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಇದರ ಆಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳೆಯರ ಮೇಲಿನ ನಿವಾರಣಾ ದಿನದ ಪ್ರಯುಕ್ತ ಉಳ್ಳಾಲ ತಾಲೂಕು ಮಟ್ಟದ ಜಾಥಾ ಹಾಗೂ ಮಹಿಳಾ ಸಮಾವೇಶ ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ಬುಧವಾರ ನಡೆಯಿತು.

ಕಾರ್ಯಕ್ರಮವನ್ನು ಡಾ.ಸಲೀಮ ಉದ್ಘಾಟಿಸಿ ಮಾತನಾಡಿದರು. ಅನುಪಮಾ ಮಾಸಿಕ ಉಪ ಸಂಪಾದಕಿ ಸಬೀಹ ಫಾತಿಮಾ ವಿಚಾರ ಮಂಡಿಸಿ, ಬಂಧನದ ಸಂಕೋಲೆಯೊಳಗೆ ಮಹಿಳೆಯರು ಈಗ  ಬದುಕುತ್ತಿದ್ದಾರೆ , ಹೆಣ್ಮಕ್ಕಳ ಅತ್ಯಾಚಾರ ಮಾಡಿ ದಾರಿ ಮಧ್ಯೆ ಎಸೆದು ಹೋಗುವ ಕಾಲ ಬಂದಿದೆ. ಹೆಣ್ಣಿನ ಜೊತೆ ಗಂಡಿಗೂ ಮಾನ ಮರ್ಯಾದೆ ಉಳಿಸುವ ಅಗತ್ಯ ಇದೆ ಎಂದರು.

ದೌರ್ಜನ್ಯ ವನ್ನು ಸಹಿಸಿ ಕೊಂಡು ಇರಲು ಮಹಿಳೆಯರಿಗೆ ಸಾಧ್ಯವಿಲ್ಲ. ಹೆಣ್ಣಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಲು ಸಮಾಜ ಮತ್ತು ಕಾನೂನಿನಲ್ಲಿ ಅವಕಾಶವಿಲ್ಲ. ಹೆಣ್ಣು ಮಕ್ಕಳು, ಮಹಿಳೆಯರು ಒಂದೇ ಸಮಾಜಕ್ಕೆ ಸೇರಿದವರು. ಇದರಲ್ಲಿ ಜಾತಿ ಧರ್ಮ ಇಲ್ಲ. ಈಗ ಜಾತಿ, ಧರ್ಮದ ಅಡ್ಡಗೋಡೆ ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ಹರಿಣಿ ಪ್ರಾಸ್ತಾವಿಕವಾಗಿ, ಮಾತನಾಡಿದರು ಆಯಿಷಾ ಯು.ಕೆ ಕವನ ಮಂಡಿಸಿದರು. ಕಾರ್ಯಕ್ರಮ ದಲ್ಲಿ ಲತೀಫಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಶೇಸನ್ ಇದರ  ಸದಸ್ಯೆಯರ ಬೀದಿ ನಾಟಕ ಪ್ರದರ್ಶನ ನಡೆಯಿತು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಶೇಸನ್ ಉಳ್ಳಾಲ ಘಟಕದ ಸದಸ್ಯಉಮಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಸದಸ್ಯ ಸಾಜಿದಾ ಮುಬೀನ್ ವಂದಿಸಿದರು.

Similar News