ಗೋಳ್ತಮಜಲು: ಅನುಗ್ರಹ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾಕೂಟ

Update: 2022-11-30 05:34 GMT

 ಬಂಟ್ವಾಳ, ನ.30: ಗೋಳ್ತಮಜಲಿನಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ಜರುಗಿತು.

ಅನುಗ್ರಹ ಎಜುಕೇಶನಲ್ ಟ್ರಸ್ಟ್‌ ಸಂಚಾಲಕ ಅಮಾನುಲ್ಲಾ ಖಾನ್ ಬಲೂನುಗಳನ್ನು ಹಾರಿಸುವುದರ ಮೂಲಕ ಕ್ರೀಡೋತ್ಸವವನ್ನು ಉದ್ಘಾಟಿಸಿದರು.

 ಕಾಲೇಜು ಆಡಳಿತ ಸಮಿತಿಯ ಕೋಶಾಧಿಕಾರಿ ಹೈದರ್ ಅಲಿ ನೀರ್ಕಜೆ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಇಬ್ರಾಹೀಂ ಚೆಂಡಾಡಿ, ಅಬ್ದುಲ್ಲಾ ಚೆಂಡಾಡಿ, ಟ್ರಸ್ಟ್‌ ಸದಸ್ಯರಾದ ಅಬ್ದುಲ್ಲ ಕುಂಞಿ, ಪ್ರಾಂಶುಪಾಲೆ ಹೇಮಲತಾ ಬಿ.ಡಿ. ಮತ್ತು ಉಪಪ್ರಾಂಶುಪಾಲೆ ಮಮಿತಾ ಎಸ್, ರೈ ಉಪಸ್ಥಿತರಿದ್ದರು.

ಪಿಯುಸಿ ಮತ್ತು ಪದವಿಯ ನಾಲ್ಕು ಕ್ರೀಡಾ ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಪ್ರಥಮ ಪಿಯು ವಿದ್ಯಾರ್ಥಿನಿ ಫಾತಿಮಾ ಸಫ್ರತ್ ಕಿರಾಅತ್ ಪಠಿಸಿದರು.

ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಫಾತಿಮಾ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಶಿದ ವಂದಿಸಿದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹಾಜಿರ ತಫ್ಶೀರಾ ಕಾರ್ಯಕ್ರಮ ನಿರೂಪಿಸಿದರು.

Similar News