ಮೂರನೇ ಏಕದಿನ: ನ್ಯೂಝಿಲ್ಯಾಂಡ್ ವಿರುದ್ಧ ಭಾರತ 219 ರನ್ ಗೆ ಆಲೌಟ್

Update: 2022-11-30 05:49 GMT

ಕ್ರೈಸ್ಟ್ ಚರ್ಚ್: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವು 47.3 ಓವರ್ ಗಳಲ್ಲಿ 219 ರನ್ ಗೆ ಆಲೌಟಾಗಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್(51 ರನ್, 64 ಎಸೆತ, 5 ಬೌಂಡರಿ, 1 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು.ಸುಂದರ್ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಷಲ  ಅರ್ಧಶತಕ ಸಿಡಿಸಿದರು. ಶ್ರೇಯಸ್ ಅಯ್ಯರ್ 49 ರನ್(59 ಎಸೆತ, 8 ಬೌಂಡರಿ) ಹಾಗೂ ಶಿಖರ್ ಧವನ್(28 ರನ್ಎರಡಂಕೆಯ ಸ್ಕೋರ್ ಗಳಿಸಿದರು.

ನ್ಯೂಝಿಲ್ಯಾಂಡ್ ಬೌಲಿಂಗ್ ನಲ್ಲಿ ಆ್ಯಡಮ್ ಮಿಲ್ನೆ(3-57) ಹಾಗೂ ಡರ್ಲ್ ಮಿಚೆಲ್ (3-25) ತಲಾ ಮೂರು ವಿಕೆಟ್ ಪಡೆದರುಟಿಮ್ ಸೌಥಿ 36 ರನ್ ನೀಡಿ 2 ವಿಕೆಟ್ ಪಡೆದರು.

Similar News