ಗುಜರಾತ್ ಚುನಾವಣೆ: 2 ದಿನಗಳಲ್ಲಿ ಏಳು ರ‍್ಯಾಲಿ ನಡೆಸಲಿರುವ ಪ್ರಧಾನಿ ಮೋದಿ

Update: 2022-11-30 06:47 GMT

ಹೊಸದಿಲ್ಲಿ:  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಜೆ  ಇನ್ನೂ ಏಳು ರ್ಯಾಲಿಗಳನ್ನು ನಿಗದಿಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ 27 ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಲಿದ್ದಾರೆ.  2017 ರಲ್ಲಿ ಅವರು  34 ರ್ಯಾಲಿ ನಡೆಸಿದ್ದರು.

ಈ ಬಾರಿ ತ್ರಿಕೋನ ಸ್ಪರ್ಧೆಯ  ನಡುವೆಯೂ ಬಿಜೆಪಿ ರಾಜ್ಯದಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಕಡಿಮೆ ರ್ಯಾಲಿ ನಡೆಸಿ ಸುಮಾರು ಮೂರು ದಶಕಗಳ ಕಾಲ ತನ್ನ ಹಿಡಿತವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಬಿಜೆಪಿಯು ಕಳೆದ ಬಾರಿ ಕಾಂಗ್ರೆಸ್‌ನಿಂದ ಸಾಕಷ್ಟು ಹೋರಾಟವನ್ನು ಎದುರಿಸಿತ್ತು.  ಪಕ್ಷವು  ಪ್ರಧಾನಿ  ಮೋದಿಯ ಮೇಲೆ ಅವಲಂಬಿತವಾಗಿದೆ. ರಾಜ್ಯ ನಾಯಕತ್ವವು ರಾಜ್ಯ ಚುನಾವಣೆಗಳಲ್ಲಿಯೂ ದೊಡ್ಡ ಪಾತ್ರ ವಹಿಸುತ್ತಿಲ್ಲ.

ಡಿಸೆಂಬರ್ 1 ರಂದು ಮೊದಲ ಸುತ್ತಿನ ಮತದಾನದ ದಿನ, ಡಿಸೆಂಬರ್ 5 ರಂದು ಎರಡನೇ ಸುತ್ತಿನಲ್ಲಿ ಮತದಾನ ನಡೆಯುವ ಪ್ರದೇಶಗಳಲ್ಲಿ ಮೂರು ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಪಂಚಮಹಲ್ ಜಿಲ್ಲೆಯ ಕಲೋಲ್‌ನಲ್ಲಿ ಮೊದಲ ರ್ಯಾಲಿ ನಡೆಯಲಿದೆ, ನಂತರ ಛೋಟಾ ಉದಯಪುರದ ಬೊಡೆಲಿ, ತದನಂತರ ಹಿಮ್ಮತ್‌ನಗರದಲ್ಲಿ ನಡೆಯಲಿದೆ.

 ಮರುದಿನ ಅವರು ನಾಲ್ಕು ರ್ಯಾಲಿಗಳನ್ನು ನಡೆಸಲಿದ್ದಾರೆ.  ಅಹಮದಾಬಾದ್ ನಲ್ಲಿ ರ್ಯಾಲಿಯ ಹೊರತಾಗಿ ರೋಡ್ ಶೋ ನಡೆಸುತ್ತಾರೆ.

 ನವೆಂಬರ್ 20ರಂದು ಸೋಮನಾಥಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಆರಂಭಿಸಿದ್ದ  ಪ್ರಧಾನಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಹಲವು ಸರಕಾರಿ ಕಾರ್ಯಕ್ರಮಗಳಿಗಾಗಿ ರಾಜ್ಯಕ್ಕೆ ಬಂದಿದ್ದರು

Similar News