ಭಾರತ-ನ್ಯೂಝಿಲ್ಯಾಂಡ್ ಮೂರನೇ ಪಂದ್ಯ ಮಳೆಗಾಹುತಿ, ಕಿವೀಸ್ ಪಾಲಾದ ಏಕದಿನ ಸರಣಿ

Update: 2022-11-30 09:17 GMT

ಕ್ರೈಸ್ಟ್ ಚರ್ಚ್:  ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಮೂರನೇ ಏಕದಿನ ಪಂದ್ಯವು ಮಳೆಗಾಹುತಿಯಾಗಿದೆ. ಮೊದಲ ಪಂದ್ಯವನ್ನು ಜಯಿಸಿದ್ದ ಆತಿಥೇಯ ಕಿವೀಸ್ ಪಡೆ 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಲಸ್ಪಟ್ಟ ಭಾರತವು 47.3  ಓವರ್ ಗಳಲ್ಲಿ ಕೇವಲ 219 ರನ್ ಗೆ ಆಲೌಟಾಯಿತು. ಗೆಲ್ಲಲು 220 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್  18 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದ್ದಾಗ ಮಳೆ ಸುರಿಯಲಾರಂಭಿಸಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಪಡಿಸಲಾಯಿತು.

ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದಾಗ ಡೆವೊನ್ ಕಾನ್ವೇ(38) ಹಾಗೂ ಕೇನ್ ವಿಲಿಯಮ್ಸನ್ (0) ಕ್ರೀಸ್ ನಲ್ಲಿದ್ದರು. ಫಿನ್ ಅಲೆನ್(57 ರನ್, 54 ಎಸೆತ) ಹಾಗೂ ಕಾನ್ವೇ ಮೊದಲ ವಿಕೆಟಿಗೆ 97 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು.

ಮಳೆ ಬಾಧಿತ ಟ್ವೆಂಟಿ-20 ಸರಣಿಯನ್ನು ಭಾರತವು 1-0 ಅಂತರದಿಂದ ಗೆದ್ದುಕೊಂಡಿತ್ತು.

Similar News