ಉಡುಪಿ: ವೃತ್ತಿಪರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Update: 2022-11-30 13:35 GMT

ಉಡುಪಿ: ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್ ವತಿಯಿಂದ ವೃತ್ತಿಪರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಾಗಾರವು ರವಿವಾರ ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.

ಕಾರ್ಯಾಗಾರವನ್ನು ಕಾಪು ಶ್ರೀಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಗಣೇಶ್ ಆಚಾರ್ಯ ಉಚ್ಚಿಲ ಉದ್ಘಾಟಿಸಿದರು. ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಮುಖ್ಯ ಅತಿಥಿಯಾಗಿ ದ್ದರು. ‘ವ್ಯಕ್ತಿ ಸಂಬಂಧ ನಿರ್ವಹಣೆ’ ಎಂಬ ವಿಷಯಾಧಾರಿತ ಕಾರ್ಯಾಗಾರ ವನ್ನು ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಪ್ರೊ.ರಾಜೇಂದ್ರ ಭಟ್ ನೆಡೆಸಿಕೊಟ್ಟರು.

ಟ್ರಸ್ಟಿನ ಅಧ್ಯಕ್ಷ ಬಿ.ಎ. ಆಚಾರ್ಯ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು. ಟಿ.ಜಿ. ಆಚಾರ್ಯ ಹೆಬ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರತಿಮಾ ಜೆ. ಆಚಾರ್ಯ ಪ್ರಾರ್ಥಿಸಿದರೆ, ಪ್ರಸನ್ನ ಆಚಾರ್ಯ ಅಲೆವೂರು ವಂದಿಸಿದರು.

ಕಾರ್ಯಾಗಾರದಲ್ಲಿ ಸುಮಾರು ೭೫ ಅಭ್ಯರ್ಥಿಗಳು ಭಾಗವಹಿಸಿದ್ದರು. ರಸಪ್ರಶ್ನೆ, ಗುಂಪುಚರ್ಚೆ, ಸಾಧಕರು, ಸಾಧನೆಗೆ ಪ್ರೇರಣೆ, ವ್ಯಕ್ತಿಸಂಬಂಧ ನಿರ್ವ ಹಣೆ, ಉಪಕಾರ ಸ್ಮರಣೆ, ಮೊದಲಾದ ವಿಷಯಗಳ ಮೂಲಕ ವಿದ್ಯಾರ್ಥಿ ಗಳನ್ನು ಪ್ರೇರೇಪಿಸಲಾಯಿತು.

ಸಮಾರೋಪ: ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿಯ ಮೂಳೆ ಮತ್ತು ಕೀಳು ತಜ್ಞ ಡಾ.ರಘುರಾಜ್ ಕುಂದಣ ಗಾರ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಿ.ಎ.ಆಚಾರ್ಯ ವಹಿಸಿದ್ದರು.

ಅಲೆವೂರು ಯೋಗೇಶ್ ಆಚಾರ್ಯ ಶುಭ ಕೋರಿದರು. ಪ್ರೊ.ಭಾಸ್ಕರ ಆಚಾರ್ಯ ಸ್ವಾಗತಿಸಿದರು. ವಸಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.  ಗಣಪತಿ ಆಚಾರ್ಯ ವಂದಿಸಿದರು.

ಟ್ರಸ್ಟಿಗಳಾದ ಎನ್.ಪಾಂಡುರಂಗ ಆಚಾರ್ಯ ಸಾಲಿಗ್ರಾಮ, ಡಾ.ದಾಸ್ ಆಚಾರ್ಯ, ಉಷಾ ಬಿ.ಆಚಾರ್ಯ, ಸತೀಶ್ ಆಚಾರ್ಯ ಬೇಳೂರು, ಪ್ರಕಾಶ್ ಆಚಾರ್ಯ ನೇರಂಬಳ್ಳಿ, ಗಣೇಶ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.

Similar News