ಡಿ.2ರಿಂದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟ

Update: 2022-12-01 17:26 GMT

ಮಂಗಳೂರು, ಡಿ.1: ಸುಲ್ತಾನ್ ಡೈಮಂಡ್ಸ್ ಆ್ಯಂಡ್ಸ್ ಗೋಲ್ಡ್‌ನ ಮಂಗಳೂರು ಮಳಿಗೆಯಲ್ಲಿ ಡಿ. 2ರಿಂದ 20ರವರೆಗೆ ದಕ್ಷಿಣ ಭಾರತದ ಅತಿ ದೊಡ್ಡ ವಜ್ರಗಳು ಮತ್ತು ಪೊಲ್ಕಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದೆ.

ಬಹು-ನಿರೀಕ್ಷಿತ ಪ್ರದರ್ಶನ ‘ವಿಶ್ವವಜ್ರಾ’ವು ಜಗತ್ತಿನಾದ್ಯಂತದ 10,000 ಕ್ಯಾರಟ್‌ಗೂ ಅಧಿಕ ಐಜಿಐ ಪ್ರಮಾಣಿತ ವಜ್ರ ಮತ್ತು ಪೊಲ್ಕಿ ವಜ್ರಾಭರಣಗಳನ್ನು ಪ್ರದರ್ಶನಕ್ಕೆ ಇಡುತ್ತಿದೆ.

ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಅಮೆರಿಕ, ಸಿಂಗಾಪುರ ಮತ್ತು ಮಧ್ಯಪ್ರಾಚ್ಯಗಳಿಂದ ತರಿಸಲಾಗಿರುವ ವಿಶೇಷ ಅಂತರ್‌ ರಾಷ್ಟ್ರೀಯ ಮಟ್ಟದ ಸಂಗ್ರಹಗಳು ವಜ್ರಾಭರಣ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಲಕ್ಷುರಿ ಸೆಗ್ಮೆಂಟ್ ಗ್ರಾಹಕರಿಗೆ ವಿಶಾಲ ಶ್ರೇಣಿಯಲ್ಲಿ ವೈವಿಧ್ಯಮಯ ಹಾಗೂ ವಿಶಿಷ್ಟ ಸೆಲೆಬ್ರಿಟಿ ಕಲೆಕ್ಷನ್ ವಜ್ರಾಭರಣಗಳನ್ನು ಆಯ್ಕೆ ಮಾಡುವ ಅವಕಾಶವಿದೆ.

ಸಾಂಪ್ರದಾಯಿಕ ವಜ್ರಾಭರಣಗಳ ಗ್ರಾಹಕರಿಗಾಗಿ ಸಾಲಿಟೇರ್ ಕಲೆಕ್ಷನ್, ಕ್ಲೋಸ್ ಸೆಟ್ಟಿಂಗ್ ವಜ್ರಾಭರಣಗಳು ಮತ್ತು ತನ್ಮೇನಿಯ ಸಂಗ್ರಹಗಳಲ್ಲಿ ಇತ್ತೀಚಿನ ವಿನ್ಯಾಸಗಳು ಲಭ್ಯವಿವೆ.

ಬ್ರೈಡಲ್ ಸೆಗ್ಮೆಂಟ್ ಗ್ರಾಹಕರಿಗಾಗಿ ಕಾಂಟೆಂಪರರಿ ಬ್ರೈಡಲ್‌ ಡೈಮಂಡ್ ವಜ್ರಾಭರಣಗಳ ಹೊಸ ವಿನ್ಯಾಸಗಳು ಮತ್ತು ಅನ್‌ಕಟ್ ವಜ್ರಗಳು ಮತ್ತು ರೂಬಿ ಎಮರಾಲ್ಡ್ ಜಮ್‌ಸ್ಟೋನ್‌ಗಳ ಹೊಸಮಾದರಿಗಳು ಲಭ್ಯವಿವೆ.

56,000 ರೂ. ದಿಂದ ಆರಂಭಗೊಳ್ಳುವ ಡೇಲಿವೇರ್ ಲೈಟ್ ವೇಟ್ ವಜ್ರದ ನೆಕ್‌ಲೇಸ್‌ಗಳು, ರೂ. 15,000ದಿಂದ ಆರಂಭಗೊಳ್ಳುವ ಲೈಟ್‌ವೇಟ್ ಡೈಮಂಡ್ ಬಳೆ, ರೂ. 6,000ದಿಂದ ಆರಂಭಗೊಳ್ಳುವ ಡೈಮಂಡ್ ಕಿವಿಯೋಲೆಗಳು ಮತ್ತು ರೂ. 2,000ದಿಂದ ಆರಂಭಗೊಳ್ಳುವ ವಜ್ರದ ನೋಸ್ ಪಿನ್‌ಗಳು ಲೈಟ್‌ವೇಟ್ ವಿಭಾಗಗಳಲ್ಲಿ ಲಭ್ಯವಿವೆ.

ಪ್ರತಿ ಕ್ಯಾಟರ್ ವಜ್ರದ ಮೇಲೆ ರೂ. 8,000 ರಿಯಾಯಿತಿ ಬಳಕೆದಾರರಿಗೆ ಲಭಿಸುತ್ತದೆ ಎಂದು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಪ್ರಕಟನೆಯೊಂದು ತಿಳಿಸಿದೆ.

Similar News