ಶುಶ್ರೂಷಕರ ಹುದ್ದೆಗೆ ಅರ್ಜಿ ಆಹ್ವಾನ

Update: 2022-12-02 16:17 GMT

ಮಂಗಳೂರು, ಡಿ.2: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶುಶ್ರೂಷಕರ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ತಿಂಗಳಿಗೆ ಗರಿಷ್ಠ 2 ಲಕ್ಷ ರೂ. ವೇತನದೊಂದಿಗೆ 3 ತಿಂಗಳು ಉಚಿತ ವಸತಿ ವ್ಯವಸ್ಥೆ ನೀಡಲಾಗುವುದು.

ಬಿಎಸ್ಸಿ ನರ್ಸಿಂಗ್, ಜಿಎನ್‌ಎಂ ಹಾಗೂ ಪಿಬಿಬಿಎಸ್ಸಿ ನರ್ಸಿಂಗ್‌ನಲ್ಲಿ 6 ತಿಂಗಳು ಮತ್ತು ಮೇಲ್ಪಟ್ಟು ಅನುಭವ ಹೊಂದಿದ, ಐಇಎಲ್‌ಟಿಎಸ್-ಬಾನ್ಡ್ 7 ಅಥವಾ ಒಇಟಿ-ಗ್ರೇಡ್ ಬಿ ಅರ್ಹತೆ ಹೊಂದಿದ ಗರಿಷ್ಠ 50 ವರ್ಷ ಪ್ರಾಯದೊಳಗಿನರವು ಅರ್ಜಿ ಸಲ್ಲಿಸಬಹುದು.

ಆಸಕ್ತರು ಕಚೇರಿ ದಿನಗಳಲ್ಲಿ (2ನೇ ಹಾಗೂ 4ನೇ ಶನಿವಾರ, ರವಿವಾರ ಹಾಗೂ ಎಲ್ಲಾ ಸರಕಾರಿ ರಜೆಗಳನ್ನು ಹೊರತುಪಡಿಸಿ) ಅಶೋಕ ನಗರದಲ್ಲಿರುವ ಉರ್ವ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜ ಕರನ್ನು (ಮೊ.ಸಂ: 9110248485) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Similar News