ಉಡುಪಿ ಸುಲ್ತಾನ್‌ನಲ್ಲಿ ಶಾಪ್ ಆ್ಯಂಡ್ ವಿನ್ ಸ್ಕೀಮ್ ಮಾಸಿಕ ಡ್ರಾ

Update: 2022-12-03 14:09 GMT

ಉಡುಪಿ: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಪ್ರತಿ ಖರೀದಿಯ ಮೇಲೆ ಗ್ರಾಹಕರಿಗೆ ನೀಡುವ ಶಾಪ್ ಆ್ಯಂಡ್ ವಿನ್ ಸ್ಕೀಮ್‌ನ ಮಾಸಿಕ ಡ್ರಾದಲ್ಲಿ ಈ ತಿಂಗಳ ರೆಫ್ರಿಜರೇಟರ್ ಬಹುಮಾನವನ್ನು ಉಡುಪಿ ಮಿಷನ್ ಕಂಪೌಂಡ್ ನಿವಾಸಿ ದಿಲ್‌ಶಾದ್ ಗೆದ್ದುಕೊಂಡಿದ್ದಾರೆ.

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಮಳಿಗೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಎ.ಆರ್.ಬ್ಯಾರಿ ದುಬೈ ಬಹುಮಾನ ವಿತರಿಸಿದರು. ಸುಲ್ತಾನ್ ಉಡುಪಿ ಶಾಖಾ ಮೆನೇಜರ್ ಮುಹಮ್ಮದ್ ಅಜ್ಮಲ್, ಸೇಲ್ಸ್ ಮೆನೇಜರ್ ಇಲಿಯಾಸ್ ವಯನಾಡ್, ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್, ವಾಚ್ ಇಂಚಾರ್ಜ್ ಅಬ್ದುಲ್ ರಶೀದ್ ಮುಲ್ಕಿ, ಅಸಿಸ್ಟೇಂಟ್ ಸೇಲ್ಸ್ ಮನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಈ ಸ್ಕಿಮ್‌ನ ಪ್ರತಿ ದಿನದ ಡ್ರಾನಲ್ಲಿ ಈಗಾಗಲೇ 50 ಮಂದಿ ಗ್ರಾಹಕರು ಕುಕ್ಕರ್ ಬಹುಮಾನವಾಗಿ ಪಡೆದುಕೊಂಡಿದ್ದಾರೆ. ವಾರದ ಡ್ರಾನಲ್ಲಿ ರುಬೀನಾ, ಸಲೋನಿ ಫ್ರಾನ್ಸಿಕ್, ಮುಹಮ್ಮದ್ ರಫೀಕ್, ಮುಹಮ್ಮದ್ ತಲ್ಹಾ ಮಿಕ್ಸಿ/ಫ್ಯಾನ್ ಬಹುಮಾನವಾಗಿ ಗೆದ್ದುಕೊಂಡಿದ್ದಾರೆ. ಬಂಪರ್ ಡ್ರಾದಲ್ಲಿ ಬಹುಮಾನ ಹುಂಡೈ ಗ್ರಾಂಡ್ ಐ 10 ನಿಯೋಸ್ ಕಾರನ್ನು ನೀಡಲಾಗುವುದು. ಈ ಕೊಡುಗೆ ಜನವರಿ ೩೦ವರೆಗೆ ಇದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಉಡುಪಿ ಶಾಖಾ ಮೆನೇಜರ್ ಮುಹಮ್ಮದ್ ಅಜ್ಮಲ್ ತಿಳಿಸಿದ್ದಾರೆ.

Similar News