ಮಂಗಳೂರು: ಮುಸ್ಲಿಮ್ ಐಕ್ಯತಾ ಸಂದೇಶ ಕಾರ್ಯಕ್ರಮ

Update: 2022-12-03 16:28 GMT

ಮಂಗಳೂರು, ಡಿ.3: ಮುಸ್ಲಿಮರು ದಿನನಿತ್ಯ ಎದುರಿಸುವ ನೂರಾರು ಸಮಸ್ಯೆ, ಸವಾಲುಗಳ ಬಗ್ಗೆ ಆತ್ಮಾವಲೋಕನ ಮಾಡಬೇಕೇ ಹೊರತು ಯಾವ ಕಾರಣಕ್ಕೂ ಹತಾಶರಾಗಬಾರದು. ಕಾಲ ಚಕ್ರ ಉರುಳಲಿದೆ. ಸಮಸ್ಯೆಗಳ ಪರಿಹಾರಕ್ಕೆ ಸಂಘಟನಾತ್ಮಕ ಪ್ರಯತ್ನ ಮಾಡಬೇಕಿದೆ ಎಂದು ಹೈಕೋರ್ಟ್‌ನ ನ್ಯಾಯವಾದಿ ಮುಝಫರ್ ಅಹ್ಮದ್ ಕರೆ ನೀಡಿದ್ದಾರೆ.

ದ.ಕ. ಜಿಲ್ಲಾ ಮುಸ್ಲಿಮ್ ಜಸ್ಟೀಸ್ ಫೋರಂ (ಎಂಜೆಎಫ್) ವತಿಯಿಂದ ನಗರದ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದ ಮರ್‌ಹೂಂ ಅಮೀರ್ ತುಂಬೆ ವೇದಿಕೆಯಲ್ಲಿ ಶನಿವಾರ ನಡೆದ ‘ಮುಸ್ಲಿಮ್ ಐಕ್ಯತಾ ಸಂದೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮುಸ್ಲಿಮರು ಯಾವತ್ತೂ ಯಾವುದೇ ಪಕ್ಷ, ಸಂಘಟನೆಯ ಗುಲಾಮರಾಗಬಾರದು. ರಾಜಕೀಯ ಪ್ರಜ್ಞೆ ಬೆಳೆಸಿ ಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಸಮಸ್ಯೆ, ಸವಾಲು, ಆಪತ್ತು ಬಂದಾಗ ಮಾತ್ರ ಎಚ್ಚೆತ್ತುಕೊಳ್ಳದೆ ಸದಾ ಜಾಗೃತರಾಗಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದು ರ‌್ರಶೀದ್ ಉಳ್ಳಾಲ್ ಉದ್ಘಾಟಿಸಿದರು. ಎಂಜೆಎಫ್ ಸ್ಥಾಪಕಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜಿ.ಮೆಹಬೂಬ್ ಮುಖ್ಯ ಭಾಷಣ ಗೈದರು. ಎಂಜೆಎಫ್ ಅಧ್ಯಕ್ಷ ಇರ್ಶಾದ್ ಯು.ಟಿ. ದಿಕ್ಸೂಚಿ ಭಾಷಣಗೈದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಹನೀಫ್ ಖಾನ್ ಕೊಡಾಜೆ, ಹನೀಫ್ ಹಾಜಿ ಗೋಳ್ತಮಜಲು, ಮಾಜಿ ಮೇಯರ್ ಕೆ.ಅಶ್ರಫ್, ಮುಸ್ತಫ ಕೆಂಪಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ, ಎಂ.ಎಸ್.ಮುಹಮ್ಮದ್, ಯಾಸೀನ್ ಕುದ್ರೋಳಿ, ಇಸ್ಮಾಯೀಲ್ ಉಳ್ಳಾಲ ಮತ್ತಿತರರು 
ಭಾಗವಹಿಸಿದ್ದರು.

ಎಂಜೆಎಫ್ ಉಪಾಧ್ಯಕ್ಷ ಅಲಿ ಹಸನ್ ಸ್ವಾಗತಿಸಿದರು. ಸೈಫುದ್ದೀನ್ ಕುದ್ರೋಳಿ ಕಿರಾಅತ್ ಪಠಿಸಿದರು. ಪ್ರ.ಕಾರ್ಯದರ್ಶಿ ವಹಾಬ್ ಕುದ್ರೋಳಿ ವಂದಿಸಿದರು. ಕಾರ್ಯದರ್ಶಿ ಅಬ್ದುಸ್ಸಲಾಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

Similar News