ಕೊಣಾಜೆ: ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ

Update: 2022-12-04 14:20 GMT

ಕೊಣಾಜೆ: ಜಲ ಜೀವನ್ ಮಿಷನ್ ಯೋಜನೆಯಡಿ ಕೊಣಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 3.83 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ  ಶುದ್ಧ ಕುಡಿಯುವ ನೀರಿನ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಯು.ಟಿ.ಖಾದರ್ ಅಸೈಗೋಳಿಯಲ್ಲಿ ರವಿವಾರ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕುಡಿಯುವ ನೀರು, ಸುಸಜ್ಜಿತ ರಸ್ತೆ ಸೇರಿದಂತೆ  ಜನರ ಮೂಲಭೂತ ಅವಶ್ಯಕತೆಗಳಿಗೆ ಪೂರಕವಾಗಿ ಅಭಿವೃದ್ಧಿ ಯೋಜನೆಯನ್ನು ಪ್ರತೀ ಗ್ರಾಮೀಣ  ಪ್ರದೇಶದಿಂದಲೂ ನಡೆಸಲಾಗುತ್ತಿದೆ. ಸರ್ಕಾರದ ಯಾವುದೇ ಯೋಜನೆಯು ಜನರ ಬಳಿಗೆ ಯಶಸ್ವಿಯಾಗಿ ತಲುಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಇದೀಗ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕೊಣಾಜೆ ಗ್ರಾಮದಲ್ಲಿ ಪ್ರತೀ ಮನೆಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಗಾಗಿ  ಕಾಮಗಾರಿಯನ್ನು ಆರಂಭಿಸಲಾಗುತ್ತಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಂಡು ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

ಈ ಹಿಂದೆಯೇ ಮೊದಲನೆಯ ಹಂತದ ಯೋಜನೆ ತುಂಬೆಯಿಂದ ನೀರನ್ನು ನೇರವಾಗಿ ತಂದು ಕೊಣಾಜೆಯಲ್ಲಿ ಶುದ್ಧೀಕರಣ ಮಾಡಿ ಉಳ್ಳಾಲ ನಗರ ತನಕ ತೊಕ್ಕೊಟ್ಟು ಮಾರ್ಗದಲ್ಲಿ ಸಾಗಿಸುವ  ಮೇನ್ ಪೈಪ್ ಲೇನ್ ಕಾಮಗಾರಿ  ಮುಗಿದಿದೆ ಎಂದರು.

ಎರಡನೆಯ ಹಂತದ ಯೋಜನೆ ಅಂತಿಮ ಹಂತದಲ್ಲಿದ್ದು ಅನುಷ್ಠಾನಗೊಳ್ಳಲಿದೆ. ಪ್ರತಿ ಮನೆಗೆ ಪೈಪ್ ಲೈನ್ ಹಾಗೂ ಜಂಕ್ಷನ್ ಗಳಲ್ಲಿ ಟಾಂಕಿ ನಿರ್ಮಾಣಗೊಳ್ಳಿದ್ದು ಸುತ್ತುಮುತ್ತಲಿನ ಸರ್ವ ಮನೆಗಳಿಗೆ ಪೈಪ್ ಲೈನ್ ಕನೆಕ್ಷನ್ ಆಗಲಿದೆ. ಹಾಗಾಗಿ ನೀರು ಇಲ್ಲದೆ ಟ್ಯಾಂಕ್ ನಿರ್ಮಿಸಬಾರದೆಂದು ನೀರಿಗೆ ಬೋರ್ ವೆಲ್ ತೆರೆದು ನೀರು ಸಿಕ್ಕಿದ ಬಳಿಕವೇ ಟ್ಯಾಂಕ್  ನಿರ್ಮಿಸಬೇಕು ಎಂದು ಒತ್ತಾಯ ಮಾಡಿದರು.

ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂಚಲಾಕ್ಷಿ, ಕೊಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದೇವಣ್ಣ ಶೆಟ್ಟಿ, ಮುಖಂಡರಾದ ಸುನೀಲ್ ಪೂಜಾರಿ, ರುಕ್ಯಾ, ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ಡಿಸಿಸಿ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಸಲೀಂ ಮೇಘ, ಇಕ್ಬಾಲ್ ಸಾಮಣಿಗೆ, ಖಲೀಲ್ ಪಟ್ಟೋರಿ, ಸದಸ್ಯರಾದ‌ ಪ್ರೇಮ್ ಅಸೈಗೋಳಿ, ಇಕ್ಬಾಲ್ ಬರುವ, ಇಕ್ಬಾಲ್ ಕೊಣಾಜೆ, ಮುರಲೀಧರ ಮೋರ್ಲ, ರತ್ನಾಕರ ಅಸೈಗೋಳಿ, ಅರುಣ್ ಡಿಸೋಜ, ವೀಣಾ ಅಸೈಗೋಳಿ ಸೈಟ್, ವೇದಾವತಿ   ಪಟ್ಟೋರಿ, ದೇವಕಿ ಅಸೈಗೋಳಿ ಸೈಟ್, ಪ್ರವೀಣ್ ಅಸೈಗೋಳಿ, ಮುನ್ನ ಅಸೈಗೋಳಿ, ಬೋಜ ಕಾಟುಕೋಟಿ, ಉಮೇಶ್ ಪಟ್ಟೋರಿ, ಕೃಷ್ಣಪ್ಪ ಪೂಜಾರಿ, ಪ್ರದೀಪ್ ಅಸೈಗೋಳಿ    ಮೊದಲಾದವರು ಉಪಸ್ಥಿತರಿದ್ದರು.

ಕೊಣಾಜೆ ಪಂಚಾಯತಿ ಮಾಜಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Similar News