ಒಬ್ಬನನ್ನೇ ವಿವಾಹವಾದ ಐಟಿ ಎಂಜಿನಿಯರ್‌ಗಳಾದ ಅವಳಿ ಸಹೋದರಿಯರು !

ವೀಡಿಯೊ ವೈರಲ್‌

Update: 2022-12-05 03:52 GMT

ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅವಳಿ ಸಹೋದರಿಯರು ಒಬ್ಬನೇ ವ್ಯಕ್ತಿಯನ್ನು ವಿವಾಹವಾದ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ.

ಉಭಯ ಕುಟುಂಬಗಳು ಈ ವಿವಾಹಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ. ಈ ಅಪರೂಪದ ವಿವಾಹದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು newindianexpress.com ವರದಿ ಮಾಡಿದೆ.

36 ವರ್ಷ ವಯಸ್ಸಿನ ಅವಳಿ ಸಹೋದರಿಯರು ಐಟಿ ಎಂಜಿನಿಯರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಒಟ್ಟಿಗೇ ವಾಸಿಸುತ್ತಾ ಬಂದಿದ್ದ ಈ ಅವಳಿ ಸಹೋದರಿಯರು ಅತುಲ್ ಎಂಬ ವ್ಯಕ್ತಿಯನ್ನು ವಿವಾಹವಾಗಲು ನಿರ್ಧರಿಸಿದರು. ವರ ಟ್ರಾವೆಲ್ ಏಜೆನ್ಸಿ ವ್ಯವಹಾರ ನಡೆಸುತ್ತಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಮಲ್‍ಶಿರಾಸ್ ತಾಲೂಕು ಅಕ್ಲೂಜ್ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.

ಈ ವಿವಾಹಕ್ಕೆ ಎರಡೂ ಕುಟುಂಬಗಳಿಂದ ಯಾವುದೇ ಆಕ್ಷೇಪ ಇಲ್ಲವಾದರೂ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಅರಂಭಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ. ಆದರೆ ಯಾರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು newindianexpress.com ವರದಿ ಮಾಡಿದೆ.

Similar News