ಉಡುಪಿ: ಮೊದಲ ದಿನ ಜಿಲ್ಲೆಯ ಶೇ.14.36 ಮಕ್ಕಳಿಗೆ ಜೆಇ ಲಸಿಕೆ

Update: 2022-12-05 15:43 GMT

ಉಡುಪಿ, ಡಿ.5: ಒಂದು ವರ್ಷದಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಜಪಾನೀಸ್ ಎನ್‌ಸೆಫೆಲೈಟಿಸ್ (ಮೆದುಳು ಜ್ವರ-ಜೆ.ಇ.) ರೋಗ ಕಾಣಿಸಿಕೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ನೀಡಲಾ ಗುತ್ತಿರುವ ಜೆ.ಇ.ಲಸಿಕೆಯನ್ನು ಮೊದಲ ದಿನ ಜಿಲ್ಲೆಯ ಶೇ.14.36ರಷ್ಟು ಮಕ್ಕಳಿಗೆ ನೀಡಲಾಗಿದೆ. 

ಡಿ.5ರಿಂದ  24ರವರೆಗೆ ಒಂದರಿಂದ 15 ವರ್ಷದೊಳಗಿನ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಪ್ರಾರಂಭಗೊಂಡಿದ್ದು ಜಿಲ್ಲೆಯ ಅರ್ಹ 2,18,324 ಮಕ್ಕಳಲ್ಲಿ ಸಂಜೆಯವರೆಗೆ ಒಟ್ಟು 31,343 (ಶೇ.14.36) ಮಕ್ಕಳಿಗೆ ನೀಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಉಡುಪಿ ತಾಲೂಕಿನ 1,01,087 ಮಕ್ಕಳಲ್ಲಿ 13,579 (ಶೇ.13.43), ಕುಂದಾಪುರ ತಾಲೂಕಿನ 76,715 ಮಕ್ಕಳಲ್ಲಿ 11,125 (ಶೇ.14.50) ಹಾಗೂ ಕಾರ್ಕಳ ತಾಲೂಕಿನ 40,522 ಮಕ್ಕಳಲ್ಲಿ 6,639(ಶೇ.16.38) ಮಕ್ಕಳಿಗೆ ಜೆ.ಇ. ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News