ರೋಲರ್ ಸ್ಕೇಟಿಂಗ್: ಗೊನ್ಝಾಗ ಶಾಲೆ ಚಾಂಪಿಯನ್

Update: 2022-12-06 17:11 GMT

ಮಂಗಳೂರು, ಡಿ.6: ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿಗಳು 38ನೇ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಯುವರಾಜ್ ಡಿ. ಕುಂದರ್ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕಗಳನ್ನು ಗೆದ್ದು, ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ತಸ್ಮೈ ಎಂ. ಶೆಟ್ಟಿ 2 ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ.  ಹನ್ನಾ ರೋಸ್ ಫೆರ್ನಾಂಡಿಸ್ 2 ಕಂಚಿನ ಪದಕವನ್ನು ಗೆದ್ದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News