ಅಂಧರ ಟಿ20 ವಿಶ್ವಕಪ್; ಭಾರತಕ್ಕೆ ಪಾಕಿಸ್ತಾನ ತಂಡ ಆಗಮನ ಇಲ್ಲ: ಸಿಎಬಿಐ

Update: 2022-12-08 01:57 GMT

ಹೊಸದಿಲ್ಲಿ: ಪಾಕಿಸ್ತಾನದ ಅಂಧರ ಕ್ರಿಕೆಟ್ ತಂಡ ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿಲ್ಲ. ಆಟಗಾರರು ವೀಸಾಗಳನ್ನು ಪಡೆದಿಲ್ಲವಾದ್ದರಿಂದ ತಂಡ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕ್ರಿಕೆಟ್ ಅಸೋಸಿಯೇಶನ್ ಫಾರ್ ಬ್ಲೈಂಡ್ ಇನ್ ಇಂಡಿಯಾ (Cricket Association for the Blind in India - CABI)  ಪ್ರಕಟಿಸಿದೆ.

"ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸುತ್ತಿಲ್ಲ. ಇದು ದೃಢಪಟ್ಟಿದೆ. ಅವರು ವೀಸಾಗಳನ್ನು ಪಡೆದಿಲ್ಲ" ಎಂದು CABI ಅಧ್ಯಕ್ಷ ಮಹಾಂತೇಶ್ ಜಿ.ಕೆ. ಹೇಳಿದ್ದಾರೆ.

"ಭಾರತೀಯ ಹೈಕಮಿಷನ್‍ನಿಂದ ಪಾಸ್‍ಪೋರ್ಟ್ ಸಂಗ್ರಹದ ಇ-ಮೇಲ್ ಸ್ವೀಕರಿಸಿದ ಬಳಿಕ ಪಾಕಿಸ್ತಾನ ತಂಡ ಬುಧವಾರ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್‍ನಿಂದ ಪಾಸ್‍ಪೋರ್ಟ್‍ಗಳನ್ನು ಪಡೆದು ಕೊಂಡಿದೆ. ಆದರೆ ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡಲಾಗಿಲ್ಲ" ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.

ಭಾರತದ ಗೃಹ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನದ ಅಂಧರ ಕ್ರಿಕೆಟ್ ತಂಡದ ಆಗಮನಕ್ಕೆ ಹಸಿರು ನಿಶಾನೆ ತೋರಿತ್ತು. ಆದರೆ ಸಕಾಲಕ್ಕೆ ವೀಸಾ ಕ್ಲಿಯರೆನ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಬಂದಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ sports.ndtv.com ವರದಿ ಮಾಡಿದೆ.

Similar News