ಗುಜರಾತ್ ಚುನಾವಣೆ: ಭಾರೀ ಅಂತರದಿಂದ ಗೆಲುವು ಸಾಧಿಸಿದ ಕ್ರಿಕೆಟಿಗ ಜಡೇಜಾ ಪತ್ನಿ ರಿವಾಬಾ ಜಡೇಜಾ

Update: 2022-12-08 11:00 GMT

ಹೊಸದಿಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಶೇ.57 ರಷ್ಟು ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ.  ಆಮ್ ಆದ್ಮಿ ಪಕ್ಷದ ಕರ್ಶನ್‌ಭಾಯ್ ಕರ್ಮುರ್ ಅವರು 23 ಶೇಕಡಾ ಮತಗಳೊಂದಿಗೆ ಎರಡನೇ ಅತಿ ಹೆಚ್ಚು ಸ್ಥಾನ ಪಡೆದ ಪ್ರತಿಸ್ಪರ್ಧಿಯಾಗಿದ್ದು, ಕಾಂಗ್ರೆಸ್‌ನ ಬಿಪೇಂದ್ರಸಿನ್ಹ್ ಚತುರ್‌ಸಿನ್ಹ್ 15.5 ಶೇಕಡಾ ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.

 ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿ, ರಿವಾಬಾ ಜಡೇಜಾ 2019 ರಲ್ಲಿ ಬಿಜೆಪಿಗೆ ಸೇರಿದ್ದರು. ಇದಕ್ಕೂ ಮುನ್ನ ಆಕೆಯ ಮಾವ ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.  ಆಕೆಯ ಅತ್ತಿಗೆ ಕಾಂಗ್ರೆಸ್ ನಾಯಕಿ ನಯನಾಬಾ ಜಡೇಜಾ,  ಕೂಡ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.

Similar News