ಎನ್‌ಐಟಿಕೆಯ ಚಾರ್ಜ್‌ಸ್ವಾಪ್ ಬ್ಯಾಟರಿ ವಿನಿಮಯ ತಂತ್ರಜ್ಞಾನಕ್ಕೆ ಪ್ರಶಸ್ತಿ

ಏಷ್ಯಾದ ಅತಿದೊಡ್ಡ ಎಥೆರಿಯಮ್ ಹ್ಯಾಕಥಾನ್‌ನಲ್ಲಿ ಪ್ರದಾನ

Update: 2022-12-08 14:39 GMT

ಮಂಗಳೂರು, ಡಿ.8: ಎನ್‌ಐಟಿಕೆಯ ಚಾರ್ಜ್‌ಸ್ವಾಪ್ ಬ್ಯಾಟರಿ ವಿನಿಮಯ ತಂತ್ರಜ್ಞಾನಕ್ಕೆ  ಪ್ರಶಸ್ತಿ ಲಭಿಸಿದ್ದು, ಏಷ್ಯಾದ ಅತಿದೊಡ್ಡ ಎಥೆರಿಯಮ್ ಹ್ಯಾಕಥಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಆಶಿಶ್ ಭರತ್, ಆಶಿಮ್ ಜವಾಹಿರ್, ಅಭಿರಾಜ್ ಮೆಂಗಡೆ ಮತ್ತು ಎನ್‌ಐಟಿಕೆಯಿಂದ ಪಾರ್ಥ್ ಮಿತ್ತಲ್ ಮತ್ತು ಐಐಟಿ-ಡಿ-ಇದರ  ರಾಹುಲ್ ಪೂಜಾರಿ ಅವರನ್ನು ಒಳಗೊಂಡ ಐವರು ವಿದ್ಯಾರ್ಥಿಗಳ ತಂಡವು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಡಿ.2-4ರವರೆಗೆ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 69 ದೇಶಗಳ 20,000ಕ್ಕೂ ಹೆಚ್ಚು ಹ್ಯಾಕರ್‌ಗಳು ಭಾಗವಹಿಸಿದ್ದರು.

Similar News