ಅಮೆರಿಕದ ಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ್ತಿ ಬಿಡುಗಡೆ: ರಶ್ಯದ ಜತೆ ಕೈದಿ ವಿನಿಮಯ

Update: 2022-12-08 18:34 GMT

ವಾಷಿಂಗ್ಟನ್, ಡಿ.8: ಅಮೆರಿಕದ ಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರಿನರ್ ರಶ್ಯದ ಜತೆಗಿನ ಕೈದಿ ವಿನಿಮಯ ಪ್ರಕ್ರಿಯೆಯಲ್ಲಿ ಬಿಡುಗಡೆಗೊಂಡಿದ್ದು ಇದೀಗ ಅಮೆರಿಕದ ವಶದಲ್ಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

‘ಸಾವಿನ ವ್ಯಾಪಾರಿ’ ಎಂದು ಕುಖ್ಯಾತಿ ಹೊಂದಿರುವ, ರಶ್ಯದ ಶಸ್ತ್ರಾಸ್ತ್ರ ವ್ಯಾಪಾರಿ ವಿಕ್ಟರ್ ಬೌಲ್ಟ್‌ರನ್ನು ಕೈದಿ ವಿನಿಮಯ ಪ್ರಕ್ರಿಯೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಶ್ವೇತಭವನ ಹೇಳಿದೆ.

ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ಗ್ರಿನ್ನರ್‌ರನ್ನು ರಶ್ಯ ಅಧಿಕಾರಿಗಳು ಬಂಧಿಸಿದ್ದರು. ಅಮೆರಿಕ ತಂಡ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಬಾಸ್ಕೆಟ್‌ಬಾಲ್ ಪಂದ್ಯಾಟದ ಸ್ವರ್ಣ ಗೆಲ್ಲುವಲ್ಲಿ ಗ್ರಿನ್ನರ್ ಪ್ರಮುಖ ಪಾತ್ರ ವಹಿಸಿದ್ದು ಅವರ ಬಿಡುಗಡೆಗೆ ಅಮೆರಿಕ ಆಡಳಿತದ ಮೇಲೆ ಒತ್ತಡ ಹೆಚ್ಚಿತ್ತು.

Similar News