ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ (ಕುಪ್ಮಾ) ಸಂಘಟನೆಗೆ ಚಾಲನೆ

Update: 2022-12-09 17:45 GMT

ಮಂಗಳೂರು, ಡಿ.9;ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿಂದು ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸರಕಾರದ ಕೆಲಸ ವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಖಾಸಗಿ ಅನುದಾನ ರಹಿತ ಕಾಲೇಜು ಗಳನ್ನು ನೀತಿ ನಿಯಮಗಳನ್ನು ರೂಪಿಸುವವರು ಗಮನಿಸಿ ಅವರನ್ನು ಈ ನಿಟ್ಟಿನಲ್ಲಿ ಸೇರಿಸಿ ಕೊಳ್ಳಬೇಕಾದ ಅಗತ್ಯವಿದೆ. ಸರ್ಕಾರ ಶಿಕ್ಷಣ ಕ್ಷೇತ್ರ ವನ್ನು ಬಲಗೊಳಿಸಬೇಕಾದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಭಾಗೀದಾರಿಕೆ ಅಗತ್ಯವಿದೆ ಎಂದು ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ಅಧ್ಯಕ್ಷ ಡಾ.ಮೋಹನ್ ಆಳ್ವ ಸ್ವಾಗತಿಸಿ ಮಾತನಾಡುತ್ತಾ, ಸಮಾಜದಲ್ಲಿ ಖಾಸಗಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಿದ್ದಾರೆ. ರಾಜ್ಯ ದ ಪದವಿ ಪೂರ್ವ ಕಾಲೇಜು ಗಳಲ್ಲಿ 3300 ಖಾಸಗಿ ಕಾಲೇಜುಗಳಿವೆ 6 ಲಕ್ಷ 13 ಸಾವಿರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸರಕಾರ ಅನುದಾನ ರಹಿತ ಖಾಸಗಿ ಕಾಲೇಜು ಗಳನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ‌ ನಿರ್ಲಕ್ಷಿಸಿದೆ. ಇದನ್ನು ಸರಕಾರ ಸರಿಪಡಿಸ ಬೇಕಾಗಿದೆ. ಸರ್ಕಾರ ಅನುದಾನ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಶೈಕ್ಷಣಿಕ ಯೋಜನೆ ಗಳ ಅನುಷ್ಠಾನಕ್ಕೆ ಸರಕಾರಕ್ಕೆ ಸಹಾಯ ಮಾಡಲು ಖಾಸಗಿ ಕಾಲೇಜುಗಳು ಸಿದ್ಧ ವಿದೆ ಖಾಸಗಿ ಸಂಸ್ಥೆಗಳ ಸವಾಲು ಗಳನ್ನು ಸಂಘಟಿತ ವಾಗಿ ಎದುರಿಸಲು ಕುಪ್ಮಾ ರೂಪುಗೊಂಡಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.

ಸಮಾರಂಭದಲ್ಲಿ  ಸಂಘಟನೆಯ ಕಾರ್ಯದರ್ಶಿ ನರೇಂದ್ರ ಎಲ್ ನಾಯಕ್, ಪದಾಧಿಕಾರಿಗಳಾದ ಡಾ.ಎಂ.ಬಿ. ಪುರಾಣಿಕ್, ಕೆ.ಸಿ.ನಾಯ್ಕ್, ಕೆ.ರಾಧಾ ಕೃಷ್ಣ ಶೆಣೈ , ಡಾ.ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.

Similar News