ಬೆಂಗಳೂರು: ಸ್ನೇಹಿತರ ಜತೆ ಲೈಂಗಿಕತೆಗೆ ಬಲವಂತ: ಪತಿ ವಿರುದ್ಧ ಪತ್ನಿ ದೂರು

Update: 2022-12-10 02:22 GMT

ಬೆಂಗಳೂರು: ಸ್ನೇಹಿತರ ಜತೆ ಲೈಂಗಿಕತೆಗೆ ಬಲವಂತಪಡಿಸಿ, ಸೆಕ್ಸ್ ವೀಡಿಯೊಗಳ ಮೂಲಕ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು 34 ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ತಮ್ಮ ಪತಿ ವಿರುದ್ಧವೇ ಠಾಣೆಗೆ ದೂರು ನೀಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಥಣಿಸಂದ್ರ ಮುಖ್ಯರಸ್ತೆಯ ಸಂಪಿಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ.

36 ವರ್ಷ ವಯಸ್ಸಿನ ಟೆಕ್ಕಿ ಪತಿಯನ್ನು ಬಂಧಿಸಲಾಗಿದೆ. ಬೇರೆ ವ್ಯಕ್ತಿಗಳ ಜತೆ ಲೈಂಗಿಕತೆಗೆ ಒಪ್ಪದಿದ್ದರೆ ಪತಿ ಹಲ್ಲೆ ನಡೆಸುತ್ತಿದ್ದರು ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿಯ ಇಬ್ಬರು ಸ್ನೇಹಿತರ ಜತೆ ಬಲವಂತವಾಗಿ ಲೈಂಗಿಕತೆಗೆ ತಳ್ಳಿದ್ದಲ್ಲದೇ ಈ ಕೃತ್ಯವನ್ನು ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಚ್ಛೇದನ ಕೇಳಿದಾಗಲೆಲ್ಲ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪತ್ನಿ ವಿವರಿಸಿದ್ದಾರೆ.

ಈ ದಂಪತಿ 2011ರಲ್ಲಿ ವಿವಾಹವಾಗಿದ್ದು, ಒಬ್ಬ ಮಗ ಇದ್ದಾನೆ. ಆರೋಪಿ ಟೆಕ್ಕಿ ಆಲ್ಕೋಹಾಲ್ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದು, ಮಹಿಳೆಯ ಸಹೋದರಿ ಜತೆ ಲೈಂಗಿಕತೆ ನಡೆಸಲು ಬಲವಂತಪಡಿಸಿದ್ದ ಎಂದೂ ಸಂಪಿಗೆಹಳ್ಳಿ ಠಾಣೆಯಲ್ಲಿ ದಾಖಲಿಸಿದ ಎಫ್‍ಐಆರ್‌ನಲ್ಲಿ ಹೇಳಲಾಗಿದೆ.

ಗಾಂಜಾ ವ್ಯಸನಿಯಾಗಿರುವ ಗಂಡ ಮನೆಯಲ್ಲಿ ಹೂಗಿಡಗಳ ಪಾಟ್‍ನಲ್ಲಿ ಗಾಂಜಾ ಬೆಳೆದಿದ್ದಾನೆ ಎಂದೂ ಆಪಾದಿಸಲಾಗಿದ್ದು, ಪೊಲೀಸರು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

Similar News