×
Ad

ಕೃಷ್ಣ ಬಂಗೇರಗೆ ʼಡಾ.ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಅವಾರ್ಡ್-2022ʼ

Update: 2022-12-14 19:18 IST

ಪಡುಬಿದ್ರಿ: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ವತಿಯಿಂದ ನೀಡಲ್ಪಡುವ ಡಾ.ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಅವಾರ್ಡ್-2022ನ್ನು ದಲಿತ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಪಡುಬಿದ್ರಿಯ ಕೃಷ್ಣ ಪಿ. ಬಂಗೇರ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಅಂಬೇಡ್ಕರ್ ಯುವಸೇನೆಯ ಗೌರವಾದ್ಯಕ್ಷ, ಅಂಬೇಡ್ಕರ್ ಭವನದ ಅಧ್ಯಕ್ಷ, ಪಡಬಿದ್ರಿ ಬೋರ್ಡು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಬ್ರಹ್ಮಮುಗ್ಗೇರ್ಕಳ ಸಾಂಸ್ಕೃತಿಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ಪಡುಬಿದ್ರಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾಗಿ ವಲಯ ಸೇನಾನಿಯಾಗಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Similar News