ನವ ಮಂಗಳೂರು ಬಂದರಿಗೆ ಮತ್ತೊಂದು ಪ್ರಯಾಣಿಕ ಹಡಗು ಆಗಮನ

Update: 2022-12-15 14:06 GMT

ಮಂಗಳೂರು, ಡಿ.15: ನವ ಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೆ ಪ್ರಯಾಣಿಕ ಹಡಗು ‘ಎಂ ಎಸ್ ನೌಟಿಕ’ ಇಂದು ಆಗಮಿಸಿತು. ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಹಡಗಿನಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸ್ವಾಗತಿಸಲಾಯಿತು.

ಹಡಗು 548 ಪ್ರಯಾಣಿಕರು ಹಾಗೂ 397 ಸಿಬ್ಬಂದಿಯನ್ನು ಹೊಂದಿದ್ದು, ಮಾಲ್ಡೀವ್‌ಗೆ ಪ್ರಯಾಣ ಬೆಳೆಸಿರುವ ಈ ಹಡಗು ಮಸ್ಕತ್ ನಿಂದ ಭಾರತಕ್ಕೆ ಆಗಮಿಸಿದ್ದು, ಮುಂಬೈ, ಮರ್ಮಗಾಂನಿಂದ ಮಂಗಳೂರಿಗೆ ಆಗಮಿಸಿದೆ. ಇಂದು ಬೆಳಗ್ಗೆ 6 ಗಂಟೆಗೆ ನವ ಮಂಗಳೂರು ಬಂದರು ತೀರಕ್ಕೆ ಹಡಗು ಆಗಮಿಸಿದ್ದು, ಅದರಲ್ಲಿದ್ದ ಪ್ರಯಾಣಿಕರು ಮೂಡಬಿದ್ರೆಯ ಸಾವಿರ ಕಂಬದ ಬಸದಿ, ಅಲೋಶಿಯಸ್ ಚಾಪೆಲ್ ಮತ್ತು ಅಚಲ್ ಗೇರುಬೀಜ ಕಾರ್ಖಾನೇ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು, ಮಾರುಕಟ್ಟೆಗೆ ಭೇಟಿ ನೀಡಿದರು. ಸಂಜೆ 5 ಗಂಟೆಯ ಸುಮಾರಿಗೆ ಹಡಗು ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿತು. 

Similar News