ಸುಪ್ರೀಂಕೋರ್ಟ್ ಮೆಟ್ಟಲೇರುವುದಕ್ಕೆ ಲಂಡನ್ ಹೈಕೋರ್ಟ್ ಅನುಮತಿ ನಿರಾಕರಣೆ: ನೀರವ್ ಮೋದಿ ಗಡಿಪಾರು ಸನ್ನಿಹಿತ?

Update: 2022-12-15 18:24 GMT

ಲಂಡನ್,ಡಿ.15: ವಂಚನೆ ಹಾಗೂ ಕಪ್ಪುಹಣ ಬಿಳುಪು ಪ್ರಕರಣದ ಆರೋಪಗಳಿಗೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವುದರ ವಿರುದ್ಧ  ಬ್ರಿಟನ್ನ ಸುಪ್ರೀಂಕೋರ್ಟ್ನಲ್ಲಿ ಕಾನೂನುಹೋರಾಟ ನಡೆಸುವ   ಭಾರತೀಯ ಮೂಲದ ಉದ್ಯಮಿ ನೀರವ್ ಮೋದಿ ಪ್ರಯತ್ನ ಗುರುವಾರ ವಿಫಲವಾಗಿದೆ.

ಗಡಿಪಾರು ವಿರುದ್ಧ ನೀರವ್ ಸಲ್ಲಿಸಿದ  ಮನವಿಯನ್ನು  ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಲಂಡನ್ ಹೈಕೋರ್ಟ್ ಗುರುವಾರ  ಅನುಮತಿ ನಿರಾಕರಿಸಿತ್ತು.  ಇದರೊಂದಿಗೆ ನೀರವ್ ಮೋದಿ ವಿಚಾರಣೆಗಾಗಿ ಭಾರತಕ್ಕೆ ಗಡಿಪಾರುವ ಮಾಡುವ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆಯೆಂದು ಮೂಲಗಳು ತಿಳಿಸಿವೆ.

ಆತನಿಗೆ ಈಗ  ಮಾನವಹಕ್ಕುಗಳ ಯುರೋಪಿಯನ್ ನ್ಯಾಯಾಲಯದ ಮೆಟ್ಟಲೇರುವ ಏಕೈಕ ಆಯ್ಕೆಯಷ್ಟೆ ಉಳಿದುಕೊಂಡಿದೆ. ಭಾರತಕ್ಕೆ  ತನ್ನನ್ನು  ಗಡಿಪಾರುಗೊಳಿಸಿದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುವ ಅಪಾಯವಿದೆ ಎಂದು ನೀರವ್ ಮೋದಿ, ಲಂಡನ್ ಹೈಕೋರ್ಟ್ಗೆ  ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದರು.

ಕಳೆದ ತಿಂಗಳು ತನ್ನ ಗಡಿಪಾರು ಆದೇಶದ ವಿರುದ್ಧ ನೀರವ್ ಮೋದಿ ಸಲ್ಲಿಸಿದ ಅರ್ಜಿಯನ್ನು ಲಂಡನ್ ಹೈಕೊರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ  ಅವರು ಬ್ರಿಟನ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಬಯಸಿದ್ದನು. ಬ್ರಿಟನ್ನಲ್ಲಿ ಸಾರ್ವಜನಿಕ  ಮಹತ್ವದ ಪ್ರಕರಣಗಳನ್ನು ಮಾತ್ರವೇ ಸುಪ್ರೀಂಕೋರ್ಟ್ಗೆ ಒಪ್ಪಿಸಲಾಗುತ್ತದೆ. ಆದ್ದರಿಂದ ಹೈಕೋರ್ಟ್ನ ಸಮ್ಮತಿ ಇದ್ದರೆ ಮಾತ್ರವೇ  ಸುಪ್ರೀಂಕೋರ್ಟ್ಗೆ  ಮೇಲ್ಮನವಿ ಸಲ್ಲಿಸಬಹುದಾಗಿದೆ.

ಗುಜರಾತ್ ಮೂಲದ ವಜ್ರ ವ್ಯಾಪಾರಿಯಾದ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ನಲ್ಲಿ ನಡೆದ 11 ಸಾವಿರ ಕೋಟಿ ರೂ.  ವಂಚನೆ ಪ್ರಕರಣದಲ್ಲಿ ತಾನು ಶಾಮೀಲಾಗಿದ್ದೆನೆಂಬ ಆರೋಪ ಕೇಳಿಬರುತ್ತಿದ್ದಂತೆಯೇ 2018ರಲ್ಲಿ  ದೇಶದಿಂದ ಪಲಾಯನಗೈದು ಲಂಡನ್ನಲ್ಲಿ ನೆಲೆಸಿದ್ದನು.

ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ ವಂಚಿಸಿದ ಪ್ರಕರಣದಲ್ಲಿ ನೀರವ್ ಮೋದಿ ಅವರ ಚಿಕ್ಕಪ್ಪ ಮಹುಲ್ ಚೋಕ್ಸಿ  ಕೂಡಾ ಆರೋಪಿಯಾಗಿದ್ದಾನೆ. ಆ್ಯಂಟಿಗುವಾ ಹಾಗೂ ಬಾರ್ಬುಡಾಗಳ ಪೌರತ್ವಪಡೆದಿರುವ ಮೆಹುಲ್ ಚೋಕ್ಸಿ ಕೂಡಾ ಭಾರತಕ್ಕ್ಕೆೆ ಬೇಕಾಗಿದ್ದಾನೆ.

2019ರ ಮಾರ್ಚ್ ತಿಂಗಲಿಂದೀಚೆಗೆ ನೀರವ್ ಮೋದಿಯನ್ನು ಲಂಡನ್ನ ಜೈಲಿನಲ್ಲಿರಿಸಲಾಗಿದೆ.

Similar News