ಇರಾನ್: ಜೈಲಿನಲ್ಲಿರುವ ಪತ್ರಕರ್ತರನ್ನು ಪ್ರತಿನಿಧಿಸುತ್ತಿದ್ದ ವಕೀಲರ ಬಂಧನ

Update: 2022-12-18 17:41 GMT

ಟೆಹ್ರಾನ್: ಇರಾನ್ ನಲ್ಲಿ ಮಹಾಸಿ ಅಮಿನಿ ಹತ್ಯೆಯ ಬಳಿಕ ಭುಗಿಲೆದ್ದಿರುವ ಪ್ರತಿಭಟನೆಯ ವರದಿ ಮಾಡಿದ್ದಕ್ಕಾಗಿ ಜೈಲಿನಲ್ಲಿರುವ ಪತ್ರಕರ್ತರು ಹಾಗೂ ಕಾರ್ಯಕರ್ತರನ್ನು ಪ್ರತಿನಿಧಿಸುತ್ತಿದ್ದ ವಕೀಲರನ್ನು ಇರಾನ್ ಅಧಿಕಾರಿಗಳು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಜೈಲಿನಲ್ಲಿರುವ ಹಲವು ಪತ್ರಕರ್ತರು ಹಾಗೂ ಕಾರ್ಯಕರ್ತರ ಪರ ವಕೀಲರಾದ ಮುಹಮ್ಮದ್ ಅಲಿ ಕಮ್ಫಿರೋಜಿಯನ್ನು ಸಮನ್ಸ್ ಕೂಡಾ ನೀಡದೆ ಬಂಧಿಸಲಾಗಿದೆ. ಅವರ ವಿರುದ್ಧ ದಾಖಲಿಸಿರುವ ಪ್ರಕರಣದ ಬಗ್ಗೆಯೂ ಮಾಹಿತಿಯಿಲ್ಲ ಎಂದು ವರದಿ ತಿಳಿಸಿದೆ. 

ಮಹಿಳಾ ಪತ್ರಕರ್ತರಾದ ನೀಲೋಫರ್ ಹಮೀದಿ ಹಾಗೂ ಇಲಾಹ್ ಮುಹಮ್ಮದಿಯನ್ನು ಕ್ರಮವಾಗಿ ಸೆಪ್ಟಂಬರ್ 20 ಮತ್ತು ಸೆಪ್ಟಂಬರ್ 29ರಂದು ಇರಾನ್ ಅಧಿಕಾರಿಗಳು ಬಂಧಿಸಿದ್ದಾರೆ.

Similar News